ಕಲ್ಯಾಣ ಕರ್ನಾಟಕ ದ ಕಿರೀಟ ಕಲಬುರ್ಗಿಯಲ್ಲಿ ಇಂದು ಹೃದಯ ಭಾಗದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಇಂದು 18 ಶಿಕ್ಷಕರೀಗೆ ಆದರ್ಶ ಶಿಕ್ಷಕ ಪ್ರಶಸ್ತಿ ಕಾರ್ಯಕ್ರಮ ವನ್ನು ಅರ್ಥ ಪೂರ್ಣ ವಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪತ್ರಕರ್ತರ ಸಂಘ ದ ರಾಜ್ಯ ಅಧ್ಯಕ್ಷರು ಆದ ಶ್ರೀ ಶಿವಾನಂದ ತಗಡುರ್, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರು ಆದ ಶ್ರೀ ಆಯೇಷಾ ಖಾನ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಶ್ರೀ ವಿಜಯ್ ಕುಮಾರ್ ಪಾಟೀಲ್ ತೇಗಲ್ ತಿಪ್ಪಿ ಮಾತನಾಡಿ ಶಿಕ್ಷಕರ ವೃತ್ತಿ ಅತೀ ಸ್ರೇಷ್ಟ ಹಾಗೂ ಗೌರವ ಹುದ್ದೆ, ಅವರ ಪಾತ್ರ ಸಮಾಜದ ಸುಧಾರಣೆ ಯಲ್ಲಿ ಅತೀ ಮುಖ್ಯ, ಹೀಗಾಗಿ ಸಾಂಕೇತ್ ವಾಗಿ ಕೇವಲ 18 ಕಲಬುರಗಿ ಜಿಲ್ಲಾ ಶಿಕ್ಷಕರ ಆಯ್ಕೆ ಮಾಡಿದ್ದೇವೆ ಎಂದು ತಿಲಿಸಿದರು.
ಕಾರ್ಯಕ್ರಮದಲ್ಲಿ DDPI ಶ್ರೀ ಸೂರ್ಯಕಾಂತ್ ಮಾಡನೆ ಶಿಕ್ಷಕರ ಅಧ್ಯಕ್ಷರು ಆದ ಶ್ರೀ ಮಹೇಶ್ ಹೊಗಾರ್, ಶ್ರೀ ಪರಮೇಶ್ವರ್ ದೇಸಾಯಿ, ಹಾಗೂ ಕನ್ನಡ ಸಾಹಿತ್ಯ ಪರಿಷತ್ ನ ಶ್ರೀ ಶಿವರಾಜ್ ಅಂಡಗಿ, ಶ್ರೀ ರವೀಂದ್ರ ಬಂಟ್ ನಳ್ಳಿ, ಶ್ರೀ ಧರ್ಮಣ್ಣ ಧನ್ನಿ, ಶ್ರೀ ಶರಣ್ ರಾಜ್ ಚಪ್ಪರ್ ಬಂದಿ, ಹೀಗೆ, ಅನೇಕ ಕನ್ನಡ ದ ಮನಸುಗಳು ಹಾಜರಿದ್ದರು, ಕೊನೆಯಲ್ಲಿ ಬಾಲಕ ಶ್ರೀ ವಿಶ್ವನಾಥ್ ಪಾಟೀಲ್ ಅವರಿಂದ ಏಕ ಅಭಿನಯ ಪಾತ್ರ ನಡೆಯಿತು.