ತುರುವೇಕೆರೆ: ತಾಲೂಕು ದಂಡಿನಶಿವರ ಗ್ರಾಮದಲ್ಲಿ. ಮಂಜುಳಾ (45) ವರ್ಷದ ಮಹಿಳೆ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ನೆಡೆದಿದೆ ಈಕೆಯ ಆತ್ಮಹತ್ಯೆ ಗೆ ಮೈಕ್ರೋಫೈನಾನ್ಸ್ ಗಳು ನೀಡುತ್ತಿದ್ದ ಕಿರುಕುಳವೇ ಈಕೆಯ ಸಾವಿಗೆ ಕಾರಣ ಎಂದು ಅಕ್ಕ ಪಕ್ಕದ ಮನೆಯವರು, ಸಾರ್ವಜನಿಕರು ಆಕ್ರೋಶ ಹೊರ ಹಾಕಿದರು.
ತಾಲೂಕಿನಲ್ಲಿ ಮೈಕ್ರೋ ಫೈನಾನ್ಸ್ ಗಳ ಕಿರುಕುಳ ದಿನದಿಂದ ದಿನಕ್ಕೆ ಹೆಚ್ಚಾದಂದೆ ಕಂಡುಬಂದಿದು ತುರುವೇಕೆರೆ ಹಾಗೂ ದಂಡಿಶಿವರ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನ ದಿಂದ ದಿನಕ್ಕೆ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿವೆ ಈಗಾಗಲೇ ದಲಿತ ಪರ ಸಂಘಟನೆಗಳು ಮೈಕ್ರೋ ಫೈನ್ಸ್ಸ್ ನೀಡುತ್ತಿರುವ ಕಿರುಕುಳ ಗಳ ಬಗ್ಗೆ ಧ್ವನಿ ಎತ್ತಿದ್ದು ಅನೇಕ ಮನವಿಗಳನ್ನು ಕೂಡ ಸಂಬಂಧ ಪಟ್ಟ ಇಲಾಖೆಗೆ ನೀಡಿರುತ್ತಾರೆ ಇನ್ನಾದರೂ ನಮ್ಮನು ಆಳುವ ಸರಕಾರಗಳು.
ಅಧಿಕಾರಿಗಳು ಇದರ ಬಗ್ಗೆ ಕೂಲಂಕುಶವಾದ ಪರಿಶೀಲನೆ ನೆಡಸಿ.ಕಿರುಕುಳ ನೀಡುತ್ತಿರುವ ಮೈಕ್ರೋ ಫೈನಾನ್ಸ್ ಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈ ಕೊಳ್ಳು ಬೇಕು ಎಂದು. ಸಾರ್ವಜನಿಕರು ಆಗ್ರಹಿಸಿದ್ದಾರೆ, ಈ ಸಂಬಂಧ ದಂಡಿನಶಿವರ ಪಿಎಸ್ಐ ಚಿತ್ತರಂಜನ್ ಆತ್ಮ ಹತ್ಯೆ ಮಾಡಿಕೊಂಡ ಮಹಿಳೆಯ ಮನೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡು.
ಮೃತ ದೇಹ ವನ್ನು ಶವ ಪರೀಕ್ಷೆಗಾಗಿ ತುರುವೇಕೆರೆ ಸಾರ್ವಜನಿಕ ಆಸ್ಪತ್ರೆ ಗೆ ರವಾನಿಸಿ.ಪೊಲೀಸ್ ಇಲಾಖೆ ಸಾವಿನಬಗ್ಗೆ ತನಿಖೆ ಕೈ ಗೊಂಡಿದ್ದಾರೆ