Share Market Update: ವಾರದ ನಾಲ್ಕನೇ ವಹಿವಾಟಿನ ದಿನವಾದ ಇಂದು ಅಂದರೆ ಗುರುವಾರ ಷೇರು ಮಾರುಕಟ್ಟೆಯಲ್ಲಿ ಭಾರಿ ಆಕ್ಷನ್ ನೋಡಲು ಸಿಕ್ಕಿದೆ. ಏಕೆಂದರೆ ಇಂದು ಷೇರು ಮಾರುಕಟ್ಟೆಯಲ್ಲಿ ಸತತ ನಾಲ್ಕು ದಿನಗಳ ಗೂಳಿ ಓಟಕ್ಕೆ ಬ್ರೇಕ್ ಬಿದ್ದಿದ್ದು, ಬಿಎಸ್ಇ ಸೆನ್ಸೆಕ್ಷ್ 294 ಅಂಕಗಳ ಕುಸಿತ ಕಂಡು ಸಂವೇದಿ ಸೂಚ್ಯಂಕ 62,884ಕ್ಕೆ ತಲುಪಿದೆ.
- ಬಿಎಸ್ಇ ಸೆನ್ಸೆಕ್ಸ್ನಲ್ಲಿ ಪವರ್ಗ್ರಿಡ್ನ ಪಾಲು ಶೇ.1 ರಷ್ಟು ಏರಿಕೆಯೊಂದಿಗೆ ಟಾಪ್ ಗೇನರ್ ಆಗಿದ್ದರೆ,
- ಕೊಟಕ್ ಬ್ಯಾಂಕ್ ಶೇ.1.5 ರಷ್ಟು ಕುಸಿಯುವ ಮೂಲಕ ಟಾಪ್ ಲೂಸರ್ ಆಗಿದೆ.
- ಜಾಗತಿಕ ಮಾರುಕಟ್ಟೆಯಲ್ಲಿ ಸುಸ್ತಿಯ ಸಂಕೇತ ಕಂಡುಬಂದಿದೆ, US ನಲ್ಲಿ ಏರಿಳಿತದ ನಡುವೆ ಮಿಶ್ರ ವ್ಯಾಪಾರ ನಡೆದಿದೆ,
Share Market Update:
Stock Market Update: ವಾರದ ನಾಲ್ಕನೇ ವಹಿವಾಟಿನ ದಿನವಾದ ಇಂದು ಅಂದರೆ ಗುರುವಾರ ಷೇರು ಮಾರುಕಟ್ಟೆಯಲ್ಲಿ ಭಾರಿ ಆಕ್ಷನ್ ನೋಡಲು ಸಿಕ್ಕಿದೆ. ಏಕೆಂದರೆ ಇಂದು ಷೇರು ಮಾರುಕಟ್ಟೆಯಲ್ಲಿ ಸತತ ನಾಲ್ಕು ದಿನಗಳ ಗೂಳಿ ಓಟಕ್ಕೆ ಬ್ರೇಕ್ ಬಿದ್ದಿದ್ದು, ಬಿಎಸ್ಇ ಸೆನ್ಸೆಕ್ಷ್ 294 ಅಂಕಗಳ ಕುಸಿತ ಕಂಡು ಸಂವೇದಿ ಸೂಚ್ಯಂಕ 62,884ಕ್ಕೆ ತಲುಪಿದೆ. ಅದೇ ರೀತಿ ನಿಫ್ಟಿ ಕೂಡ 91 ಅಂಕ ಕುಸಿದು 18,634ಕ್ಕೆ ತಲುಪಿದೆ. ಐಟಿ ಮತ್ತು ರಿಯಾಲ್ಟಿ ಷೇರುಗಳು ಮಾರುಕಟ್ಟೆಯಲ್ಲಿ ದುರ್ಬಲ ಷೇರುಗಳ ಮುಂಚೂಣಿಯಲ್ಲಿವೆ. ಬುಧವಾರ, ದೇಶೀಯ ಮಾರುಕಟ್ಟೆಗಳು ಸತತ ನಾಲ್ಕನೇ ದಿನಗಳ ಕಾಲ ಹಸಿರು ಅಂಕಿಗಳಲ್ಲಿ ತನ್ನ ವಹಿವಾಟನ್ನು ಅಂತ್ಯಗೊಳಿಸಿದ್ದವು ಎಂಬುದು ಇಲ್ಲಿ ಗಮನಾರ್ಹ. ಇದರಲ್ಲಿ ಬಿಎಸ್ಇ ಸೆನ್ಸೆಕ್ಸ್ 350 ಅಂಕಗಳ ಏರಿಕೆಯೊಂದಿಗೆ 63,142ಕ್ಕೆ ತಲುಪಿತ್ತು.
ನಿಫ್ಟಿಯಲ್ಲಿ ಷೇರುಗಳ ಸ್ಥಿತಿಗತಿ ಹೇಗಿತ್ತು?
ರಾಷ್ಟ್ರೀಯ ಷೇರು ಮಾರುಕಟ್ಟೆಯ ಸ್ಥಿತಿಗತಿ ಕುರಿತು ಹೇಳುವುದಾದರೆ NTPC ಷೇರುಗಳಲ್ಲಿ +2.50% ಏರಿಕೆಯನ್ನು ಗಮನಿಸಲಾಗಿದ್ದರೆ, JSE steel +2.50%, ONGC +1.50%, L&T +1% ಏರಿಕೆಯೊಂದಿಗೆ ತನ್ನ ವಹಿವಾಟನ್ನು ಮುಂದುವರೆಸಿವೆ. ಕಳಪೆ ಪ್ರದರ್ಶನ ತೋರಿದ ಷೇರುಗಳಲ್ಲಿ ಗ್ರಾಸಿಮ್ (-3.30%), ಸನ್ ಫಾರ್ಮಾ (-3%), ಕೋಟಕ್ ಬ್ಯಾಂಕ್ (-2.90%) ಹಾಗೂ ಟೆಕ್ ಮಹೀಂದ್ರಾ ಷೇರುಗಳು ಶಾಮೀಲಾಗಿವೆ.
ಸೆನ್ಸೆಕ್ಸ್ ಷೇರುಗಳ ಸ್ಥಿತಿಗತಿ ಹೇಗಿತ್ತು?
ಬಿಎಸ್ಇ ಸೆನ್ಸೆಕ್ಸ್ನಲ್ಲಿ ಪವರ್ಗ್ರಿಡ್ನ ಪಾಲು ಶೇ.1 ರಷ್ಟು ಏರಿಕೆಯೊಂದಿಗೆ ಟಾಪ್ ಗೇನರ್ ಆಗಿದ್ದರೆ, ಕೊಟಕ್ ಬ್ಯಾಂಕ್ ಶೇ.1.5 ರಷ್ಟು ಕುಸಿಯುವ ಮೂಲಕ ಟಾಪ್ ಲೂಸರ್ ಆಗಿದೆ.
ಜಾಗತಿಕ ಮಾರುಕಟ್ಟೆಯ ಸ್ಥಿತಿಗತಿ ಹೇಗಿತ್ತು?
ಜಾಗತಿಕ ಮಾರುಕಟ್ಟೆಯಲ್ಲಿ ಸುಸ್ತಿಯ ಸಂಕೇತ ಕಂಡುಬಂದಿದೆ, US ನಲ್ಲಿ ಏರಿಳಿತದ ನಡುವೆ ಮಿಶ್ರ ವ್ಯಾಪಾರ ನಡೆದಿದೆ, 250 ಶ್ರೇಣಿಯ ವಹಿವಾಟಿನ ಮಧ್ಯೆ ಡೌ 90 ಅಂಕಗಳ ಮೇಲೆ ವಹಿವಾಟನ್ನು ನಿಲ್ಲಿಸಿದೆ. ಎನರ್ಜೀ, ಆರ್ಥಿಕ ಸಂಬಂಧಿತ ಷೇರುಗಳ ಖರೀದಿಯಿಂದ ಡೌಗೆ ಬೆಂಬಲ ದೊರೆತಿದೆ, ಇನ್ನುಳಿದಂತೆ, ಸ್ಮಾಲ್ಕ್ಯಾಪ್ಸ್ ರ್ಯಾಲಿ ಮುಂದುವರಿದಿದೆ, ರಸ್ಸೆಲ್ 2000 1.8% ಏರಿಕೆ ಕಂಡಿದೆ. NASDAQ ದಿನದ ಕನಿಷ್ಠ ಮಟ್ಟದಲ್ಲಿ 1.3% ರಷ್ಟು ಕುಸಿತ ಅನುಭವಿಸಿದೆ. ಅನುಭವಿ ಐಟಿ ಷೇರುಗಳಲ್ಲಿ ಮಾರಾಟದ ಒತ್ತಡ ಮುಂದುವರೆದಿದೆ, ಆಲ್ಫಾಬೆಟ್ ಷೇರುಗಳು 3.8%, ಅಮೆಜಾನ್ 4.2% ಕುಸಿತ ಅನುಭವಿಸಿವೆ. ಬಾಂಡ್ ಈಲ್ಡ್ ಸುಮಾರು 3.8% ಕ್ಕೆ ಏರಿಕೆಯಾಗಿದೆ.