ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ಜುಗಾಡ್ ಕೂಲರ್ ವಿಡಿಯೋ ಈಗ ಎಲ್ಲರ ಗಮನ ಸೆಳೆದಿದೆ. ಹೀಗಾಗಿ, ಈ ವಿಡಿಯೋ ಈಗ ಸಾಕಷ್ಟು ವೀಕ್ಷಣೆಯನ್ನು ಗಳಿಸುವಲ್ಲಿಯೂ ಯಶಸ್ವಿಯಾಗಿದೆ.
ಹೈಲೈಟ್ಸ್:
- ಡ್ರಮ್‌ನಲ್ಲೇ ಕೂಲರ್ ತಯಾರಿಸಿದ ಉತ್ಸಾಹಿ
- ಕ್ರಿಯಾಶೀಲ ಪ್ರಯತ್ನಕ್ಕೆ ನೆಟ್ಟಿಗರ ಫುಲ್ ಮಾರ್ಕ್ಸ್
- ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
ಇನ್ನೇನು ಮಾನ್ಸೂನ್ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಆದರೂ ಬಹುತೇಕ ಕಡೆಗಳಲ್ಲಿ ಸೆಖೆ ತನ್ನ ಪ್ರತಾಪ ತೋರಿಸುತ್ತಿದೆ. ಬಿಸಿಲಿನ ಶಾಖ ಜನರನ್ನು ಹೈರಾಣಾಗಿಸಿದೆ. ಈ ಬಿಸಿಲ ಬೇಗೆಯಿಂದ ಪಾರಾಗಲು ಜನ ತಂಪಿನ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ಫ್ಯಾನು, ಎಸಿ, ಕೂಲರ್‌ಗೆಲ್ಲಾ ಬೇಡಿಕೆಯೂ ಹೆಚ್ಚಾಗಿದೆ. ಇದರ ನಡುವೆ ಕೆಲವರು ತಂಪಾಗಿಲು ತಾವೇ ಹೊಸ ಹೊಸ ಸಾಧನಗಳನ್ನು ಕಂಡು ಹಿಡಿಯುತ್ತಿದ್ದಾರೆ. ಸದ್ಯ ಅಂತಹದ್ದೊಂದು ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಸೋಶಿಯಲ್ ಮೀಡಿಯಾದಲ್ಲಿ ಜುಗಾಡ್ ಐಡಿಯಾಗಳು ವಿಡಿಯೋಗಳು ವೈರಲ್ ಆಗುವುದು ಹೊಸದೇನೂ ಅಲ್ಲ. ಸದಾ ಇಂತಹ ಒಂದಲ್ಲ ಒಂದು ದೃಶ್ಯಗಳು ನಮಗೆ ಕಾಣಸಿಗುತ್ತವೆ. ಹೀಗೆ ಕಾಣಸಿಗುವ ದೃಶ್ಯಗಳು ಸಹಜವಾಗಿಯೇ ನಮ್ಮಲ್ಲಿ ಕುತೂಹಲವನ್ನೂ ಮೂಡಿಸುತ್ತವೆ. ಜತೆಗೆ ಕೆಲ ಪ್ರಯತ್ನವನ್ನು ಮೆಚ್ಚುವಂತೆಯೂ ಮಾಡುತ್ತವೆ. ಇದು ಕೂಡಾ ಅಂತಹದ್ದೇ ಒಂದು ದೃಶ್ಯ. ಇಲ್ಲಿ ಉತ್ಸಾಹಿಯೊಬ್ಬರು ಜುಗಾಡ್ ಕೂಲರ್ ತಯಾರಿಸಿದ್ದಾರೆ. ಡ್ರಮ್‌ಗೆ ಇಲ್ಲಿ ಕೂಲರ್‌ನ ರೂಪ ನೀಡಲಾಗಿದೆ. ಸಹಜವಾಗಿಯೇ ಈ ದೃಶ್ಯ ಎಲ್ಲರನ್ನೂ ಆಕರ್ಷಿಸಿದೆ.
ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ಕ್ಲಿಪ್‌ನಲ್ಲಿ ಡ್ರಮ್‌ನಲ್ಲಿ ಹೇಗೆ ಕೂಲರ್ ತಯಾರಿಸಲಾಗಿದೆ ಎಂಬುದನ್ನು ನೋಡಬಹುದಾಗಿದೆ. ಸೃಜನಶೀಲ ವ್ಯಕ್ತಿಯೊಬ್ಬರು ನೀಲಿ ಬಣ್ಣದ ನೀರಿನ ಟ್ಯಾಂಕ್ ಅನ್ನು ‘ಕೂಲರ್’ ಆಗಿ ಪರಿವರ್ತಿಸಿದ್ದಾರೆ. ಈ ಟ್ಯಾಂಕನ್ನು ಬೇಕಾದ ರೀತಿಯಲ್ಲಿ ಕತ್ತರಿಸಿ ಅಲ್ಲಿ ಪ್ಲಾಸ್ಟಿಕ್ ಫ್ಯಾನ್, ನೀರಿನ ಮೋಟಾರ್ ಸೇರಿ ವಿವಿಧ ಅಗತ್ಯ ವಸ್ತುಗಳನ್ನು ಅಳವಡಿಸಿರುವುದು ಇಲ್ಲಿ ಕಾಣುತ್ತದೆ. ಜತೆಗೆ ಈ ಕೂಲರ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನೂ ಇಲ್ಲಿ ತೋರಿಸಲಾಗಿದೆ.