‘ಆದಿಪುರುಷ್’ ಚಿತ್ರದಲ್ಲಿ ಪ್ರಭಾಸ್ ಲುಕ್ ಹೀಗೆಯೇ ಇರಬೇಕು, ಹಾಗೆಯೇ ಇರಬೇಕು ಎಂದು ಅಭಿಮಾನಿಗಳು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಆದರೆ, ಪ್ರಭಾಸ್ಗೆ ಈ ಮೀಸೆ ಅಷ್ಟು ಹೊಂದುತ್ತಿಲ್ಲ ಎಂಬುದನ್ನು ಅನೇಕರು ಹೇಳಿದ್ದಾರೆ.
ಪ್ರಭಾಸ್ ನಟನೆಯ ‘ಆದಿಪುರುಷ್’ ಸಿನಿಮಾ (Adipurush Movie) ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ರಾಮಾಯಣದ ಕಥೆ ಆಧರಿಸಿ ಸಿದ್ಧವಾದ ಈ ಚಿತ್ರ ಹೈಪ್ ಪಡೆದುಕೊಂಡಿದೆ. ಬಾಲಿವುಡ್ ನಿರ್ದೇಶಕ ಓಂ ರಾವತ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಭಾಸ್ (Prabhas) ರಾಮನಾಗಿ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್ ಬೆಡಗಿ ಕೃತಿ ಸನೋನ್ ಸೀತೆಯಾಗಿ ನಟಿಸುತ್ತಿದ್ದಾರೆ. ರಿಲೀಸ್ ಆದ ಎರಡು ಟ್ರೇಲರ್‌ಗಳು ಚಿತ್ರದ ನಿರೀಕ್ಷೆಯನ್ನು ಹೆಚ್ಚು ಮಾಡಿದೆ. ಈ ಸಿನಿಮಾ ರಿಲೀಸ್ ಆಗುತ್ತಿರುವ ಹಿನ್ನೆಲೆಯಲ್ಲಿ ಸಿನಿಮಾದ ಬಗ್ಗೆ ವಿವಾದಗಳೂ ಹೆಚ್ಚಾಗುತ್ತಿವೆ. ಈ ಮೊದಲು ಬಿಡುಗಡೆಯಾಗಿರುವ ಟೀಸರ್ ಬಗ್ಗೆ ಟೀಕೆಗಳು ವ್ಯಕ್ತವಾಗಿತ್ತು. ಗ್ರಾಫಿಕ್ಸ್ ಉತ್ತಮವಾಗಿಲ್ಲ ಎಂಬ ಮಾತು ಕೇಳಿಬಂದಿವೆ. ಈಗ ಪ್ರಭಾಸ್ ಮೀಸೆ ಬಗ್ಗೆ ಅಪಸ್ವರ ತೆಗೆಯಲಾಗಿದೆ. ಇದಕ್ಕೆ ನಿರ್ಮಾಪಕರಿಂದ ಸ್ಪಷ್ಟನೆ ಸಿಕ್ಕಿದೆ.
ಪ್ರಭಾಸ್ ಅವರು ಹ್ಯಾಂಡ್ಸಂ ಹಂಕ್. ಅವರ ಲುಕ್ಗೆ ಅನೇಕರು ಫಿದಾ ಆಗಿದ್ದಾರೆ. ಅವರಿಗೆ ಕೋಟ್ಯಂತರ ಅಭಿಮಾನಿಗಳು ಇದ್ದಾರೆ. ‘ಆದಿಪುರುಷ್’ ರಾಮಾಯಣ ಆಧರಿಸಿ ಸಿದ್ಧವಾದ ಸಿನಿಮಾ. ಹೀಗಾಗಿ, ಇಲ್ಲಿ ಪ್ರಭಾಸ್ ಲುಕ್ ಹೀಗೆಯೇ ಇರಬೇಕು, ಹಾಗೆಯೇ ಇರಬೇಕು ಎಂದು ಅಭಿಮಾನಿಗಳು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಆದರೆ, ಪ್ರಭಾಸ್ಗೆ ಈ ಮೀಸೆ ಅಷ್ಟು ಹೊಂದುತ್ತಿಲ್ಲ ಎಂಬುದನ್ನು ಅನೇಕರು ಹೇಳಿದ್ದಾರೆ.
ಈ ಬಗ್ಗೆ ‘ಆದಿಪುರುಷ್’ ಸಿನಿಮಾ ನಿರ್ಮಾಪಕರಲ್ಲಿ ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ‘ಆದಿಪುರುಷ್ ಸಿನಿಮಾ ಎಲ್ಲರಿಗೂ ಇಷ್ಟವಾಗುತ್ತದೆ. ರಾಮನಿಗೆ ಮೀಸೆ ಏಕೆ ಎಂದು ಸಿನಿಮಾ ನೋಡಿದರೆ ಅರ್ಥವಾಗುತ್ತದೆ ಪ್ರೇಕ್ಷಕರ ಹಲವು ಅನುಮಾನಗಳಿಗೆ ಸಿನಿಮಾ ನೋಡಿದ ನಂತರ ಸ್ಪಷ್ಟನೆ ಸಿಗಲಿದೆ’ ಎಂದು ನಿರ್ಮಾಪಕರು ಹೇಳಿರುವುದಾಗಿ ವರದಿ ಆಗಿದೆ.
ಈ ಮೊದಲು ರಿಲೀಸ್ ಆದ ಟೀಸರ್ನಲ್ಲಿ ರಾವಣನ ಗಡ್ಡದ ಬಗ್ಗೆ ಅನೇಕರು ಅಪಸ್ವರ ತೆಗೆದಿದ್ದರು. ಭಾರತದ ಮೇಲೆ ದಂಡೆತ್ತಿ ಬಂದ ಮುಸ್ಲಿಂ ರಾಜರ ರೀತಿಯಲ್ಲಿ ಈ ಪಾತ್ರವನ್ನು ಸೃಷ್ಟಿ ಮಾಡಲಾಗಿದೆ ಎಂದು ಅನೇಕರು ಟೀಕಿಸಿದ್ದರು. ಆದರೆ, ಟ್ರೇಲರ್ನಲ್ಲಿ ರಾವಣನ ಲುಕ್ ಬದಲಾಯಿಸಲಾಗಿದೆ. ರಾವಣನಾಗಿ ಸೈಫ್ ಅಲಿ ಖಾನ್ ನಟಿಸುತ್ತಿದ್ದಾರೆ. ಈ ಸಿನಿಮಾ ಜೂನ್ 16ರಂದು ರಿಲೀಸ್ ಆಗಲಿದೆ. ಈ ಚಿತ್ರಕ್ಕೆ ಭಾರೀ ಬೆಂಬಲ ಸಿಕ್ಕಿದೆ. ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ಮಾಪಕ ಅಭಿಷೇಕ್ ಅಗರ್ವಾಲ್, ನಟ ರಣಬೀರ್ ಕಪೂರ್, ರಾಮ್ ಚರಣ್ ತಲಾ 10 ಸಾವಿರ ಟಿಕೆಟ್ ಖರೀದಿಸುವುದಾಗಿ ಹೇಳಿದ್ದಾರೆ.