ಬೆಂಗಳೂರು : ಮೆಜೆಸ್ಟಿಕ್ ಬಳಿಯ ಬಿನ್ನಿಮಿಲ್ ರೈಲ್ವೇ ಗೇಟ್ ಬಳಿ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ನಡೆದಿದೆ. ಮಡತರನ್ನು ಕೇತನ್ ಮಣಿಕಂಠನ್ (23 ವರ್ಷ), ಶರತ್ ಕಣ್ಣನ್ ರವಿ (27) ಎಂದು ಗುರುತಿಸಲಾಗಿದೆ.
ಬಿನ್ನಿಪೇಟೆ ರೈಲ್ವೆ ಗೇಟ್ ಬಳಿ, ಇಬ್ಬರೂ ಯುವಕರು ಹಳಿ ದಾಟುತ್ತಿದ್ದರು. ಈ ವೇಳೆ ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ಸಂಬಂಧ ರೈಲ್ವೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೇತನ್ ದಿನಗೂಲಿಯಾಗಿ ಕೆಲಸ ಮಾಡುತ್ತಿದ್ದರೆ, ಶರತ್ ಫ್ಲಿಪ್‌ಕಾರ್ಟ್‌ನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಹಳಿ ಮೇಲೆ ಯುವಕರು ವಾಕಿಂಗ್ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಯಾವ ರೈಲು ಡಿಕ್ಕಿ ಹೊಡೆದಿದೆ ಎಂಬುದು ತಿಳಿದುಬಂದಿಲ್ಲ.
ಅಸ್ವಾಭಾವಿಕ ಸಾವಿನ ಕುರಿತು ಬಿಎನ್‌ಎಸ್‌ನ ಸೆಕ್ಷನ್ 194 ರ ಅಡಿಯಲ್ಲಿ ಎಫ್‌ಐಆರ್ ಅನ್ನು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.