ಬೆಂಗಳೂರು : ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಗೆ ನೂರಾರು ಕೋಟಿ ರೂಪಾಯಿ ಆದಾಯ ಬಂದಿದೆ. ನಿನ್ನೆ ಒಂದೇ ದಿನದಲ್ಲಿ ಕೆಎಸ್‌ಬಿಸಿಎಲ್‌ನಿಂದ ಬರೋಬ್ಬರಿ 308 ಕೋಟಿ ರೂ. ಮದ್ಯ ಮಾರಾಟವಾಗಿದೆ.

ಡಿ.31 ರ ಮಂಗಳವಾರ ಬೆಳಗ್ಗೆಯಿಂದ ಮಧ್ಯಾಹ್ನ 2 ಗಂಟೆಯ ವರೆಗೆ 308 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ. ಅಬಕಾರಿ ಇಲಾಖೆ 250 ಕೋಟಿ ರೂ. ಮದ್ಯ ಮಾರಾಟದ ಟಾರ್ಗೆಟ್ ಇಟ್ಟುಕೊಂಡಿತ್ತು. ಕಳೆದ ವರ್ಷ 2023ರ ಡಿ.31 ರಂದು 193 ಕೋಟಿ ರೂಪಾಯಿ ಮದ್ಯ ಮಾರಾಟ ಆಗಿತ್ತು. ಈ ಬಾರಿ 2024 ಡಿ.31 ರಂದು 7,305 ಮದ್ಯ ಮಾರಾಟಗಾರರು ಕೆಎಸ್‌ಬಿಸಿಎಲ್‌ನಿಂದ ಮದ್ಯ ಖರೀದಿ ಮಾಡಿದ್ದಾರೆ.

ಐಎಂಎಲ್- 4,83,715 ಲಕ್ಷ ಬಾಕ್ಸ್ ಮಾರಾಟದಿಂದ 250.25 ಕೋಟಿ ಆದಾಯ ಬಂದಿದೆ. ಬಿಯರ್- 2,92,339 ಲಕ್ಷ ಬಾಕ್ಸ್ ಮಾರಾಟದಿಂದ 57,75 ಕೋಟಿ ಆದಾಯ ಹರಿದುಬಂದಿದೆ. ಒಟ್ಟಾರೆ 7,76,042 ಲಕ್ಷ ಬಾಕ್ಸ್ ಮದ್ಯ ಮಾರಾಟದಿಂದ 308 ಕೋಟಿ ರೂ. ಆದಾಯವಾಗಿದೆ. ನಿನ್ನೆ ಬೆಳಗ್ಗೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಕೆಎಸ್‌ಬಿಸಿಎಲ್‌ನಿಂದ ವ್ಯಾಪಾರ ಆಗಿರುವ ಮದ್ಯದ ಮಾಹಿತಿ ಇದಾಗಿದೆ. ಡಿ.27ರ ಶುಕ್ರವಾರದಂದು ಬರೋಬ್ಬರಿ 408.58 ಕೋಟಿ ರೂಪಾಯಿ ಮದ್ಯ ಮಾರಾಟವಾಗಿದೆ.

ಐಎಂಎಲ್- 6,22,062 ಲಕ್ಷ ಬಾಕ್ಸ್ ಮಾರಾಟದಿಂದ 327.50 ಕೋಟಿ ರೂ. ಆದಾಯ ಬಂದಿತ್ತು. ಬಿಯರ್- 4,04,998 ಲಕ್ಷ ಬಾಕ್ಸ್ ಮಾರಾಟದಿಂದ 80.58 ಕೋಟಿ ರೂ. ಆದಾಯ ಬಂದಿತ್ತು. ಐಎಂಎಲ್, ಬಿಯರ್ ಸೇರಿ ಒಟ್ಟು- 10,27,060 ಲಕ್ಷ ಬಾಕ್ಸ್ ಮದ್ಯ ಮಾರಾಟದಿಂದ 408.50 ಕೋಟಿ ರೂ. ಆದಾಯವಾಗಿತ್ತು ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *