ನವದೆಹಲಿ : ಚೀನಾದಲ್ಲಿ ಹ್ಯೂಮನ್ ಮೆಟಾಪ್ನ್ಯೂಮೋವೈರಸ್ ದಿಢೀರನೆ ಕಾಣಿಸಿಕೊಂಡಿದ್ದು, ಲಭ್ಯವಿರುವ ಎಲ್ಲಾ ಚಾನೆಲ್‌ಗಳ ಮೂಲಕ ಭಾರತವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಸಮಯೋಚಿತ ಶಿಷ್ಠಾಚಾರ ಅನುಸರಿಸಲು ವಿಶ್ವ ಆರೋಗ್ಯ ಸಂಸ್ಥೆಗೆ ಮನವಿ ಮಾಡಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಮುನ್ನೆಚ್ಚರಿಕೆ ಕ್ರಮವಾಗಿ, ಹೆಚ್ ಎಂಪಿವಿ ಪ್ರಕರಣಗಳನ್ನು ಪರೀಕ್ಷಿಸುವ ಪ್ರಯೋಗಾಲಯಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ, ಇಡೀ ವರ್ಷ ಹೆಚ್ ಎಂಪಿವಿಯ ಪ್ರವೃತ್ತಿಯನ್ನು ಮೇಲ್ವಿಚಾರಣೆ ಮಾಡುತ್ತದೆ.

ಈ ಪರಿಸ್ಥಿತಿಯನ್ನು ಚರ್ಚಿಸಲು ನಿನ್ನೆ ದೆಹಲಿಯಲ್ಲಿ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯದ ಅಧ್ಯಕ್ಷತೆಯಲ್ಲಿ ಜಂಟಿ ನಿಗಾ ಗುಂಪು ಸಭೆ ನಡೆಯಿತು. ವಿಶ್ವ ಆರೋಗ್ಯ ಸಂಸ್ಥೆ, ವಿಪತ್ತು ನಿರ್ವಹಣೆ ಕೋಶ, ಸಮಗ್ರ ರೋಗ ಕಣ್ಗಾವಲು ಕಾರ್ಯಕ್ರಮ, ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ, ತುರ್ತು ವೈದ್ಯಕೀಯ ಪರಿಹಾರ ತಜ್ಞರು ಏಮ್ಸ್-ದೆಹಲಿ ವಿಭಾಗ ಮತ್ತು ಆಸ್ಪತ್ರೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದವು.

ವಿವರವಾದ ಚರ್ಚೆಗಳ ನಂತರ ಮತ್ತು ಪ್ರಸ್ತುತ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ, ಇತ್ತೀಚೆಗೆ ಜ್ವರ ಹೆಚ್ಚಾಗಿ ಕಾಣುತ್ತಿದ್ದು, ಚೀನಾದಲ್ಲಿ ಪರಿಸ್ಥಿತಿಯು ಅಸಾಮಾನ್ಯವಾಗಿಲ್ಲ ಎಂದು ಒಪ್ಪಿಕೊಳ್ಳಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಪ್ರಸ್ತುತ ವೈರಸ್ ಉಲ್ಬಣಕ್ಕೆ ಕಾರಣವೆಂದರೆ ಇನ್ಫ್ಲುಯೆನ್ಸ ವೈರಸ್, ಆರ್‌ಎಸ್‌ವಿ ಮತ್ತು ಎಚ್‌ಎಂಪಿವಿ, ಋತುವಿನಲ್ಲಿ ಸಾಮಾನ್ಯ ರೋಗಕಾರಕಗಳು ಎಂದು ಸಚಿವಾಲಯ ವರದಿಗಳು ಹೇಳುತ್ತವೆ.

ಈ ವೈರಸ್‌ಗಳು ಈಗಾಗಲೇ ಭಾರತ ಸೇರಿದಂತೆ ಜಾಗತಿಕವಾಗಿ ಕಾಣಿಸಿಕೊಳ್ಳುತ್ತಿದೆ ಎಂದು ಸಚಿವಾಲಯ ಹೇಳಿದೆ, ಕಳೆದ ಕೆಲವು ವಾರಗಳಲ್ಲಿ ಉಸಿರಾಟದ ಕಾಯಿಲೆ ಪ್ರಕರಣಗಳಲ್ಲಿ ಯಾವುದೇ ಉಲ್ಬಣವಿಲ್ಲ ಎಂದು ಆಸ್ಪತ್ರೆಗಳ ವೈದ್ಯರು ದೃಢಪಡಿಸಿದ್ದಾರೆ. ಇನ್‌ಫ್ಲುಯೆಂಜಾ ಲೈಕ್ ಇಲ್‌ನೆಸ್ ಮತ್ತು ತೀವ್ರ ಉಸಿರಾಟದ ಕಾಯಿಲೆಗಾಗಿ ದೃಢವಾದ ಕಣ್ಗಾವಲು ವ್ಯವಸ್ಥೆಯು ಈಗಾಗಲೇ ಐಸಿಎಂಆರ್ ಮತ್ತು ಐಡಿಎಸ್ ಪಿ ನೆಟ್‌ವರ್ಕ್‌ಗಳ ಮೂಲಕ ಭಾರತದಲ್ಲಿ ಜಾರಿಯಲ್ಲಿದೆ ಮತ್ತು ಎರಡರ ಅಂಕಿಅಂಶಗಳು ಯಾವುದೇ ಅಸಾಮಾನ್ಯ ಉಲ್ಬಣವನ್ನು ಸೂಚಿಸುವುದಿಲ್ಲ ಎಂದು ಸಚಿವಾಲಯ ಹೇಳಿದೆ.

Leave a Reply

Your email address will not be published. Required fields are marked *