ವಾಷಿಂಗ್ಟನ್ : ದಕ್ಷಿಣ ಕ್ಯಾಲಿಫೋರ್ನಿಯಾದ ಆಕರ್ಷಕ ನಗರವಾದ ಲಾಸ್ ಏಂಜಲೀಸ್ನಲ್ಲಿ ಭೀಕರ ಕಾಡ್ಗಿಚ್ಚು ಸಂಭವಿಸಿದ್ದು, ಬೆಂಕಿ ನಿಯಂತ್ರಣಕ್ಕೆ ಬಾರದೇ ಕನಿಷ್ಠ 5 ಮಂದಿ ಸಜೀವ ದಹನವಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸುಮಾರು 15,832 ಎಕರೆ ಪ್ರದೇಶಕ್ಕೆ ಬೆಂಕಿ ವ್ಯಾಪಿಸಿದ್ದು, 1,000 ಕಟ್ಟಡಗಳು ಬೆಂಕಿಗೆ ಆಹುತಿಯಾಗಿವೆ. ಬೆಂಕಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಸುಮಾರು 1 ಲಕ್ಷ ಮಂದಿಯನ್ನು ಸ್ಥಳಾಂತರಿಸಲಾಗಿದೆ. ಇನ್ನೂ ಕೆಲವೆಡೆ ಅಸಂಖ್ಯಾತ ಐಷಾರಾಮಿ ಮನೆಗಳು ಬೆಂಕಿ ಹೊತ್ತಿಕೊಳ್ಳುವ ಭೀತಿಯಲ್ಲಿವೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಸಣ್ಣ ಪ್ರಮಾಣದಲ್ಲಿ ಹೊತ್ತಿಕೊಡ್ಡಿಂದ್ದ, ಕಾಡ್ಗಿಚ್ಚು ಜನನಿಬಿಡ ಪ್ರದೇಶಗಳಿಗೆ ವ್ಯಾಪಿಸಿದೆ. ನಿಯಂತ್ರಣಕ್ಕೆ ಬಾರದ ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಸಮರೋಪಾದಿ ಕಾರ್ಯಾಚರಣೆ ನಡೆಸುತ್ತಿದೆ. ಅಗ್ನಿಶಾಮಕ ದಳದ ಬೆಂಕಿ ನಂದಿಸುವ ಕಾರ್ಯ ಬಹುತೇಕ ಯಶಸ್ವಿಯಾಗುವ ಸಾಧ್ಯತೆಗಳಿತ್ತು. ಈ ವೇಳೆ ಚಂಡಮಾರುತ ಗಾಳಿ ಬೀಸಿದ್ದರಿಂದ ಬೆಂಕಿ ಕೆನ್ನಾಲಿಗೆ ಮತ್ತಷ್ಟು ವ್ಯಾಪಿಸಿತು ಎಂದು ವರದಿ ಹೇಳಿದೆ.
ಲಾಸ್ ಏಂಜಲೀಸ್ನಲ್ಲಿ ಹಬ್ಬಿದ ಕಾಡ್ಗಿಚ್ಚಿನಿಂದ ಸುಮಾರು 50 ಶತಕೋಟಿ ಡಾಲರ್ ಅಂದರೆ 42,000 ಕೋಟಿ ರೂ. ಸಂಪತ್ತು ಹಾನಿಯಾಗಿದೆ ಎಂದು ಅಂದಾಜಿಸಿ ವರದಿ ಮಾಡಲಾಗಿದೆ.