ಸ್ಯಾಂಡಲ್‌ವುಡ್ ನಟ ದರ್ಶನ್ ಮನೆಯಲ್ಲಿ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಇಂದು (ಜ.14) ಫಾರಂ ಹೌಸ್‌ನಲ್ಲಿ ದರ್ಶನ್ ಸಂಕ್ರಾಂತಿ ಹಬ್ಬ ಆಚರಿಸಲಿದ್ದಾರೆ. ಅದಕ್ಕಾಗಿ ಭರ್ಜರಿ ತಯಾರಿ ನಡೆದಿದೆ.
ಇಂದು ಫಾರಂ ಹೌಸನಲ್ಲಿ ನಟ ದರ್ಶನ್ ಸಂಕ್ರಾಂತಿ ಹಬ್ಬ ಆಚರಿಸಲಿದ್ದಾರೆ. ಈ ಹಿನ್ನೆಲೆ ಹಬ್ಬ ಆಚರಣೆಗೂ ಮುನ್ನ ತಾಯಿಯನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ತಾಯಿ ಮೀನಾ ತೂಗುದೀಪ ಜೊತೆ ನಟ ಕಾಲ ಕಳೆದು, ತೋಟಕ್ಕೆ ಹೋಗುವ ಮುನ್ನ ತಾಯಿ ಆಶೀರ್ವಾದ ಪಡೆದು ನಟ ತೆರಳಿದ್ದಾರೆ.
ಫಾರಂ ಹೌಸ್‌ನಲ್ಲಿ ಅದ್ಧೂರಿಯಾಗಿ ಸಂಕ್ರಾಂತಿ ಹಬ್ಬ ಆಚರಿಸಲು ತಯಾರಿ ಮಾಡಲಾಗಿದ್ದು, ನಟ ಸಾಕು ಪ್ರಾಣಿಗಳಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಹಸುಗಳಿಗೆ ದರ್ಶನ್ ತೋಟದಲ್ಲೇ ಕಿಚ್ಚು ಹಾಯಿಸಲಿದ್ದಾರೆ. ತೋಟದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಹಬ್ಬದೂಟ ಮಾಡಿಸಲಾಗಿದೆ.