ಮುಂಬೈ : ಟೀಂ ಇಂಡಿಯಾ ಸತತವಾಗಿ ಪೇಲವ ಪ್ರದರ್ಶನ ನೀಡುತ್ತಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಎಚ್ಚೆತ್ತಿದ್ದು, ಆಟಗಾರರಿಗೆ ಬಿಗ್ ಶಾಕ್ ನೀಡಲು ಮುಂದಾಗುತ್ತಿದೆ.
ವಿದೇಶ ಪ್ರವಾಸಗಳಿಗೆ ಪತ್ನಿ ಮತ್ತು ಕುಟುಂಬಸ್ಥರನ್ನು ಕರೆದೊಯ್ಯುವಂತಿಲ್ಲ. ಈ ಸಂಬಂಧ ಐದು ವರ್ಷಕ್ಕೆ ಮೊದಲು ಇದ್ದ ನಿಯಮವನ್ನು ಮರು ಜಾರಿ ಮಾಡಲು ಚಿಂತನೆ ನಡೆಸಿದೆ ಎನ್ನಲಾಗಿದೆ.
ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಅಧಿಕಾರಗಳಿಗೆ ಕತ್ತರಿ ಹಾಕಿದೆ. ಇನ್ನು ಮುಂದೆ ಯಾವುದೇ ನಿರ್ಣಯಗಳನ್ನು ಅವರು ಏಕಪಕ್ಷೀಯವಾಗಿ ತೆಗೆದುಕೊಳ್ಳುವಂತಿಲ್ಲ ಎಂದಿದೆ.
ಗಂಭೀರ್ ಮ್ಯಾನೇಜರ್ ಗೌರವ್ಗೆ ನೀಡಿದ್ದ, ಸವಲತ್ತುಗಳನ್ನು ಹಿಂಪಡೆದಿದೆ. ಅಲ್ಲದೇ ಸಹಾಯಕ ಸಿಬ್ಬಂದಿ ಪದವಿ ಅವಧಿಯನ್ನು ಮೂರು ವರ್ಷಕ್ಕೆ ಇಳಿಸಲು ಮುಂದಾಗಿದೆ.