ತಿರುಪತಿ : ತಿರುಪತಿ ತಿಮ್ಮಪ್ಪನಿಗೆ ಭಕ್ತರಿಂದ ಕಾಣಿಕೆ ರೂಪದಲ್ಲಿ ಬಂದಿದ್ದ, ಚಿನ್ನವನ್ನು ಕದ್ದಿದ್ದ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಟಿಟಿಡಿ ನೌಕರನನ್ನು ಪೊಲೀಸರು ಬಂಧಿಸಿದ್ದಾರೆ.
ಶ್ರೀವರಿ ಪರಕಾಮಣಿಯ ಸಂಗ್ರಹಾಲಯದಿಂದ ಚಿನ್ನವನ್ನು ಕದಿಯುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ತಿರುಮಲ ದೇವಸ್ಥಾನದಲ್ಲಿ ಟಿಟಿಡಿಯಲ್ಲಿರುವ ದೇಣಿಗೆ ಪೆಟ್ಟಿಗೆಯಾದ ‘ಶ್ರೀವರಿ ಹುಂಡಿ’ಯಲ್ಲಿ ಕಾಣಿಕೆಗಳನ್ನು ವಿಂಗಡಿಸಲು ಮತ್ತು ಎಣಿಸಲು ಟಿಟಿಡಿಗೆ ಸಿಬ್ಬಂದಿಯನ್ನು ಪೂರೈಸುವ ಹೊರಗುತ್ತಿಗೆ ಸಂಸ್ಥೆ ‘ಅಗ್ರಿಗೋಸ್’. ಇದರ ನೌಕರ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾನೆ.
ಪೆಂಚಲಯ್ಯ ಶೇಖರಣಾ ಕೊಠಡಿಯಿಂದ 100 ಗ್ರಾಂ ಚಿನ್ನದ ಬಿಸ್ಕೆಟ್‌ಗಳನ್ನು ಕದಿಯುವಾಗ ಸಿಕ್ಕಿಬಿದ್ದಿದ್ದಾನೆ. ಕದ್ದ ಚಿನ್ನದ ಬಿಸ್ಕೆಟ್‌ಗಳನ್ನು ಪರಕಮಣಿ ಕಟ್ಟಡದಲ್ಲಿ ಟ್ರಾಲಿಯ ಮೂಲಕ ಸಾಗಿಸುತ್ತಿದ್ದಾಗ ವಿಜಿಲೆನ್ಸ್ ಸಿಬ್ಬಂದಿ ಅಡಗಿಸಿಟ್ಟ ಚಿನ್ನವನ್ನು ಪತ್ತೆ ಮಾಡಿ, ಸಿಸಿಟಿವಿ ಮೂಲಕ ಕಳ್ಳತನವನ್ನು ದೃಢಪಡಿಸಿ, ತಿರುಮಲ ಪೊಲೀಸರಿಗೆ ಒಪ್ಪಿಸಿದ್ದಾರೆ. ಟಿಟಿಡಿ ವಿಜಿಲೆನ್ಸ್ ಸಿಬ್ಬಂದಿ ತಿರುಮಲ I ಪಟ್ಟಣ ಪೊಲೀಸರಿಗೆ ದೂರು ನೀಡಿದ್ದಾರೆ.
ನಂತರ ಪೊಲೀಸರು ಪೆಂಚಲಯ್ಯನನ್ನು ಬಂಧಿಸಿದ್ದಾರೆ. ವಿಚಾರಣೆಯ ನಂತರ ಆತನಿಂದ 555 ಗ್ರಾಂ ಚಿನ್ನ ಮತ್ತು 157 ಗ್ರಾಂ ಬೆಳ್ಳಿಯನ್ನು ವಶಪಡಿಸಿಕೊಂಡಿದ್ದಾರೆ. ಕದ್ದ ವಸ್ತುಗಳು ಒಟ್ಟು 655 ಗ್ರಾಂ ಚಿನ್ನ ಮತ್ತು 157 ಗ್ರಾಂ ಆಗಿದ್ದು, ಅಂದಾಜು 46 ಲಕ್ಷ ರೂ. ಮೌಲ್ಯದ್ದಾಗಿದೆ ಎಂದು ತಿಳಿದು ಬಂದಿದೆ.