ನ್ಯೂಯಾರ್ಕ್ : ಜನಪ್ರಿಯ ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ನ್ನು ನಿಷೇಧಿಸುವ ಫೆಡರಲ್ ಕಾನೂನು ಜಾರಿಗೆ ಬರುವ ಮುನ್ನ ಪ್ರಮುಖ ಅಪ್ಲಿಕೇಶನ್ ಸ್ಟೋರ್ ಗಳಿಂದ ಟಿಕ್‌ಟಾಕ್‌ನ ಅಪ್ಲಿಕೇಶನ್ ನ್ನು ತೆಗೆದುಹಾಕಲಾಗಿದೆ.

ಭಾರತೀಯ ಕಾಲಮಾನ ಕಳೆದ ರಾತ್ರಿ, ಆಪಲ್ ಮತ್ತು ಗೂಗಲ್‌ ಅಪ್ಲಿಕೇಶನ್ ಸ್ಟೋರ್ ಗಳಲ್ಲಿ ಅಪ್ಲಿಕೇಶನ್ ಕಂಡುಬಂದಿಲ್ಲ, ಇವು ಟಿಕ್‌ಟಾಕ್‌ನ ಚೀನಾ ಮೂಲದ ಕಂಪನಿ ಬೈಟ್‌ಡ್ಯಾನ್ಸ್ ಪ್ಲಾಟ್‌ಫಾರ್ಮ್ ನ್ನು ಮಾರಾಟ ಮಾಡಬೇಕು ಅಥವಾ ಯುಎಸ್ ನಿಷೇಧವನ್ನು ಎದುರಿಸಬೇಕು ಎಂಬ ಕಾನೂನಿನಡಿಯಲ್ಲಿ ಪ್ಲಾಟ್ ಫಾರ್ಮ್ ಒದಗಿಸುವುದನ್ನು ನಿಷೇಧಿಸಲಾಗಿತ್ತು.

ನಿನ್ನೆ ಸಂಜೆ ಬಳಕೆದಾರರು ಟಿಕ್‌ಟಾಕ್ ಅಪ್ಲಿಕೇಶನ್ ನ್ನು ತೆರೆದಾಗ, ವೀಡಿಯೊಗಳಲ್ಲಿ ಸ್ಕ್ರೋಲ್ ಮಾಡುವುದನ್ನು ತಡೆಯುವ ಕಂಪನಿಯಿಂದ ಪಾಪ್-ಅಪ್ ಸಂದೇಶ ಬಂತು. ಟಿಕ್‌ಟಾಕ್ ನ್ನು ನಿಷೇಧಿಸುವ ಕಾನೂನನ್ನು ಯುಎಸ್‌ನಲ್ಲಿ ಜಾರಿಗೆ ತರಲಾಗಿದೆ ಎಂದು ಸಂದೇಶದಲ್ಲಿತ್ತು. ಇನ್ನು ನೀವು ಟಿಕ್ ಟಾಕ್ ಬಳಸಲು ಸಾಧ್ಯವಿಲ್ಲ ಎಂದು ಅದರಲ್ಲಿ ಹೇಳಲಾಗಿತ್ತು.

ಅಮೆರಿಕಾ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರು ಅಧಿಕಾರ ವಹಿಸಿಕೊಂಡ ನಂತರ ಟಿಕ್‌ಟಾಕ್ ನ್ನು ಮರುಸ್ಥಾಪಿಸುವ ಪರಿಹಾರಕ್ಕಾಗಿ ನಮ್ಮೊಂದಿಗೆ ಕೆಲಸ ಮಾಡುವುದಾಗಿ ಹೇಳಿರುವುದು ನಮ್ಮ ಅದೃಷ್ಟ, ಎಂದು ಸಂದೇಶ ಹೇಳುತ್ತದೆ.

Leave a Reply

Your email address will not be published. Required fields are marked *