ಬಹುನಿರೀಕ್ಷಿತ 2025ನೇ ಸಾಲಿನ 97ನೇ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡವರ ಸಂಪೂರ್ಣ ಪಟ್ಟಿ ಹೊರಬಿದ್ದಿದೆ. ಆಸ್ಕರ್ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡವರ ವಿವರವನ್ನು ಆಸ್ಕರ್ ಅಕಾಡೆವಿಯು ಘೋಷಿಸಿದೆ. ಅದರಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ಗುನೀತ್ ಮೊಂಗಾ ನಿರ್ಮಾಣದ ‘ಅನುಜಾ’ ಕಿರುಚಿತ್ರವು ಬೆಸ್ಟ್ ಲೈವ್ ಆ್ಯಕ್ಷನ್ ಶಾರ್ಟ್ ವಿಭಾಗಕ್ಕೆ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ.
ಆಂಗ್ಲ ಮಾಧ್ಯಮವೊಂದಕ್ಕೆ ನಟ ನಾಗೇಶ್ ಬೋಸ್ಲೆ ಮಾತನಾಡಿ, ‘ಅನುಜಾ’ ಬಾಲ ಕಾರ್ಮಿಕ ಪದ್ಧತಿ ಕುರಿತ ಸಿನಿಮಾ. ಚಿತ್ರದಲ್ಲಿ ನಟಿಸಿದ ಮಗು ನಿಜ ಜೀವನದಲ್ಲೂ ಬಾಲ ಕಾರ್ಮಿಕಳಾಗಿದ್ದು, ಕೊಳೆಗೇರಿಯಿಂದ ಬಂದವಳು. ಇದು ಹೆಚ್ಚು ಪ್ರಸ್ತುತವಾದ ಸಿನಿಮಾವಾಗಿದೆ. ಬಾಲ ಕಾರ್ಮಿಕರು ಜೀವನದಲ್ಲಿ ಎದುರಿಸುತ್ತಿರುವ ಸವಾಲುಗಳ ಕುರಿತು ಸಿನಿಮಾ ಒಳನೋಟ ಹೊಂದಿದೆ ಎಂದು ತಿಳಿಸಿದ್ದಾರೆ.