ಬೆಂಗಳೂರು : ನೀರಿನ ದರ ಹೆಚ್ಚಿಸುವ ಬಗ್ಗೆ ಮಾತು ಬಹಳ ದಿನಗಳಿಂದ ಕೇಳಿಬರುತ್ತಲೇ ಇತ್ತು, ಅದನ್ನು ಇವತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಖಚಿತಪಡಿಸಿದ್ದಾರೆ.

ಜಲಮಂಡಳಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಶಿವಕುಮಾರ್ ಜಲಮಂಡಳಿ ನಗರವಾಸಿಗಳಿಗೆ ಒದಗಿಸುವ ನೀರಿನ ಅಕ್ರಮ ಮತ್ತು ದುರ್ಬಳಕೆ ಹೆಚ್ಚುತ್ತಿದೆ, ಬಿಡಬ್ಲ್ಯೂಎಸ್​ಎಸ್​ಬಿಯನ್ನು ನಡೆಸಲು ತಿಂಗಳಿಗೆ ₹85 ಕೋಟಿ ಖರ್ಚಾಗುತ್ತಿದೆ, ಬ್ಯಾಂಕ್ ಗಳಿಗೆ ಸಾಲಕ್ಕಾಗಿ ಅರ್ಜಿ ಹಾಕಿದರೆ ಅವರು ಜಲಮಂಡಳಿ ನಿರ್ವಹಣೆ ಸರಿಯಾಗಿ ಅಗುತ್ತಿಲ್ಲ ಎಂದು ವಾಪಸ್ಸು ಕಳಿಸುತ್ತಾರೆ ಎಂದರು.

ಬಿಡಬ್ಲ್ಯೂಎಸ್​ಎಸ್​ಬಿ ನೀರಿನ ಎಲ್ಲ ಬಳಕೆದಾರರ ಹೆಸರುಗಳು ದಾಖಲಾತಿ ಪುಸ್ತಕಗಳಿಗೆ ಬರಬೇಕು, ನೀರಿನ ದರ ಎಷ್ಟು ಹೆಚ್ಚಿಸಲಾಗುತ್ತದೆ ಅನ್ನೋದು ಬೇರೆ ವಿಷಯ, ಬಡವರು ಲೀಟರ್ ಗೆ ಒಂದು ಪೈಸೆಯನ್ನಾದರೂ ಕೊಡುವಂತಾಗಬೇಕು ಎಂದು ಸಚಿವ ಹೇಳಿದರು.

Leave a Reply

Your email address will not be published. Required fields are marked *