ಕೊಪ್ಪಳ : ನಟ ಡಾಲಿ ಧನಂಜಯ್ ಇಂದು ಕೊಪ್ಪಳ ಸಂಸ್ಥಾನದ ಗವಿಮಠಕ್ಕೆ ಆಗಮಿಸಿ, ಗವಿಸಿದ್ದೇಶ್ವರ ಸ್ವಾಮೀಜಿಗಳನ್ನು ಭೇಟಿ ಮಾಡಿ, ಮದುವೆಗೆ ಆಹ್ವಾನಿಸಿದ್ದಾರೆ.

ಗವಿಮಠದಲ್ಲಿ ಶ್ರೀಗಳನ್ನು ಭೇಟಿ ಮಾಡಿದ ಡಾಲಿ ಆಮಂತ್ರಣ ಪತ್ರಿಕೆ ನೀಡಿ, ಮದುವೆಗೆ ಆಹ್ವಾನಿಸಿದರು. ನಂತರ ಕೆಲ ಹೊತ್ತು ಗವಿಶ್ರೀ ಡಾಲಿ ಧನಂಜಯ್ ಉಭಯ ಕುಶಲೋಪರಿ ವಿಚಾರಿಸಿಕೊಂಡರು. ಈ ವೇಳೆ ಶ್ರೀಗಳು ಮಠದ ಪರಂಪರೆ, ಇತಿಹಾಸ, ರಥೋತ್ಸವ, ಜಾತ್ರೋತ್ಸವದ ಬಗ್ಗೆ ಮಾಹಿತಿ ನೀಡಿದರು.

ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಶ್ರೀಮಠದಿಂದ ಡಾಲಿ ಧನಂಜಯ್‌ಗೆ ಗವಿಸಿದ್ದೇಶ್ವರರ ಕರ್ತೃ ಗದ್ದುಗೆಯ ಫೋಟೋ ನೀಡಿ, ಸನ್ಮಾನಿಸುವ ಮೂಲಕ ಆಶೀರ್ವದಿಸಿದರು. ನಂತರ ಗವಿಮಠ ಮೈದಾನದಲ್ಲಿನ ಮಹಾದಾಸೋಹ ಭವನದಲ್ಲಿ ಡಾಲಿ ಪ್ರಸಾದ ಸ್ವೀಕರಿಸಿದರು.

Leave a Reply

Your email address will not be published. Required fields are marked *