ಚೀನಾ : ತಂತ್ರಜ್ಞಾನದಲ್ಲಿ ಅಮೆರಿಕ ಹೊಸ ಹೆಜ್ಜೆ ಹಾಕಿದಾಗೆಲ್ಲಾ ಚೀನಾ ಕೂಡ ತಾನೇನು ಸುಮ್ಮನ್ನಿಲ್ಲ ಎಂದು ಸರಿಸಮಾನವಾಗಿ ಹೆಜ್ಜೆ ಹಾಕುತ್ತಾ ಹೋಗುತ್ತಿದೆ. ಕೆಲವೊಮ್ಮೆ ಅಮೆರಿಕವನ್ನೇ ಹಿಂದಿಕ್ಕುವುದುಂಟು. ನಿನ್ನೆಯಿಂದ ಚೀನಾದ ಡೀಪ್​ಸೀಕ್ (DeepSeek AI) ಎನ್ನುವ ಹೊಸ ಎಐ ಮಾಡಲ್ ಸದ್ದು ಮಾಡುತ್ತಿದೆ.

ಅಮೆರಿಕದಂಥ ಅಮೆರಿಕ ದೇಶದ ಎಐ ಟೆಕ್ಕಿ ಉದ್ಯಮಿಗಳು ಆವಾಕ್ಕಾಗಿ ನೋಡುತ್ತಿದ್ದಾರೆ. ಓಪನ್​ಎಐ, ಗೂಗಲ್, ಮೈಕ್ರೋಸಾಫ್ಟ್ ಮೊದಲಾದ ಸಂಸ್ಥೆಗಳು ಹೊಸ ಸ್ಪರ್ಧೆಯ ವೇಗಕ್ಕೆ ಸಜ್ಜಾಗಬೇಕಾಗಿದೆ. ಪ್ರಬಲ ಎಐ ಮಾಡಲ್ ಸೃಷ್ಟಿಸುವುದು ಹೇಗೆಂದು ಸೋಜಿಗಪಡುತ್ತಿದ್ದ ಭಾರತದಂತಹ ದೇಶಗಳಿಗೆ ಡೀಪ್​ಸೀಪ್ ಹೊಸ ಭರವಸೆ ಕೊಟ್ಟಿದೆ.

ಡೀಪ್​ಸೀಕ್ ಎನ್ನುವುದು ಚ್ಯಾಟ್​ಜಿಪಿಟಿ ರೀತಿಯ ಒಂದು ಲಾರ್ಜ್ ಲ್ಯಾಂಗ್ವೇಜ್ ಮಾಡಲ್ ಆಗಿದೆ. ಅದು ಹತ್ತರಲ್ಲಿ ಒಂದು ಎಂಬುದು ಹೌದಾದರೂ ಅಮೆರಿಕದ ತಂತ್ರಜ್ಞಾನ ಕಂಪನಿಗಳು ತಲೆಕೆಡಿಸಿಕೊಂಡಿರುವುದು ಮತ್ತೊಂದು ಒಳ ಸಂಗತಿಯಾಗಿದೆ. ಕಡಿಮೆ ಹಣದಲ್ಲಿ ಡೀಪ್​ಸೀಕ್ ಸೃಷ್ಟಿಯಾಗಿದೆ. ಒಂದು ಅಥವಾ ಎರಡು ವರ್ಷದ ಹಿಂದಷ್ಟೇ ಆರಂಭವಾದ ಡೀಪ್​ಸೀಪ್ ಕಂಪನಿ ಇಷ್ಟು ಕಡಿಮೆ ಅವಧಿಯಲ್ಲಿ ಬೃಹತ್ ಎಐ ಮಾಡಲ್ ಸೃಷ್ಟಿಸಿದ್ದು ಸಾಧಾರಣ ಸಂಗತಿಯಲ್ಲ ಎನ್ನಲಾಗಿದೆ.

ಗಮನಾರ್ಹ ಸಂಗತಿ ಎಂದರೆ, ಓಪನ್​ಎಐನ ಒ1 ಎನ್ನುವ ಎಲ್​ಎಲ್​ಎಂ ಪ್ರತೀ ಮಿಲಿಯನ್ ಇನ್​ಪುಟ್ ಟೋಕನ್​ಗೆ 15 ಡಾಲರ್ ವಿಧಿಸುತ್ತದೆ. ಪ್ರತೀ ಮಿಲಿಯನ್ ಔಟ್​ಪುಟ್ ಟೋಕನ್​ಗೆ 60 ಮಿಲಿಯನ್ ಡಾಲರ್ ದರ ವಿಧಿಸುತ್ತದೆ. ಆದರೆ, ಡೀಪ್​ಸೀಕ್​ನ ಆರ್​1 ಮಾಡಲ್ ಶೇ. 4ಕ್ಕಿಂತಲೂ ಕಡಿಮೆ ಬೆಲೆಗೆ ಈ ಸರ್ವಿಸ್ ನೀಡುತ್ತದೆ. ಒಂದು ಮಿಲಿಯನ್ ಇನ್ಪುಟ್ ಟೋಕನ್​ಗೆ 0.55 ಡಾಲರ್; ಒಂದು ಮಿಲಿಯನ್ ಔಟ್​ಪುಟ್ ಟೋಕನ್​ಗೆ 2.19 ಡಾಲರ್ ಬೆಲೆ ನಿಗದಿ ಮಾಡಿದೆ.

Leave a Reply

Your email address will not be published. Required fields are marked *