ಬೆಳಗಾವಿ : ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಸುಮಾರು 50 ಜನ ಗಾಯಗೊಂಡಿದ್ದಾರೆ ಎನ್ನಲಾಗಿದ್ದು, ಕೆಲವರು ಮೃತಪಟ್ಟಿರುವ ಶಂಕೆಯೂ ವ್ಯಕ್ತವಾಗಿದೆ. ಇದೀಗ ಕರ್ನಾಟಕದ ಕೆಲವು ಮಂದಿ ಘಟನೆಯಲ್ಲಿ ಗಾಯಗೊಂಡಿರುವುದು ತಿಳಿದುಬಂದಿದೆ. ಬೆಳಗಾವಿಯ ದಂಪತಿ ಗಾಯಗೊಂಡಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಳಗಾವಿ ನಗರದ ಶೆಟ್ಟಿ ಗಲ್ಲಿ ದಂಪತಿಗೆ ಕಾಲ್ತುಳಿತದಲ್ಲಿ ಗಾಯವಾಗಿರುವುದು ತಿಳಿದುಬಂದಿದೆ. ದಂಪತಿ ಅರುಣ್ ಕೋಪರ್ಡೆ, ಕಾಂಚನಾ ಕೋಪರ್ಡೆ ಗಾಯಗೊಂಡಿದ್ದು ಸದ್ಯ ಪ್ರಯಾಗ್‌ರಾಜ್​ನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಲ್ತುಳಿತದ ವೇಳೆ ದಂಪತಿ ಬೇರೆ ಬೇರೆಯಾಗಿದ್ದಾರೆ.

ಸದ್ಯ ಅರುಣ್ ಒಂದು ಆಸ್ಪತ್ರೆಯಲ್ಲಿ, ಕಾಂಚನಾ ಮತ್ತೊಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಕುಟುಂಬಸ್ಥರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ.

ಅರುಣ್ ಕೋಪರ್ಡೆ, ಕಾಂಚನಾ ಕೋಪರ್ಡೆ ರವಿವಾರ ಬೆಳಗಾವಿಯಿಂದ ಹೊರಟ್ಟಿದ್ದರು. ಸದ್ಯ ಕಾಂಚನಾ ನಿರಂತರವಾಗಿ ಪುತ್ರ ಓಂಕಾರ್ ಜೊತೆಗೆ ಪೋನ್ ಸಂಪರ್ಕದಲ್ಲಿದ್ದಾರೆ. ಈ ಬಗ್ಗೆ ಓಂಕಾರ್ ‘ಟಿವಿ9’ ಗೆ ಮಾಹಿತಿ ನೀಡಿದ್ದಾರೆ.

ತಂದೆ ತಾಯಿಗೆ ಏನೂ ಆಗಿಲ್ಲ. ಗಾಯವಾಗಿದೆ ಅಷ್ಟೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೇರೆ ಬೇರೆ ಆಸ್ಪತ್ರೆಯಲ್ಲಿ ಅಪ್ಪ, ಅಮ್ಮ ಚಿಕಿತ್ಸೆ ಪಡೆಯುತ್ತಿದ್ದಾರೆ. ಎನೂ ತೊಂದರೆ ಇಲ್ಲ, ಅರಾಮಗಿದ್ದೇವೆ ಎಂದು ತಾಯಿ ಕಾಂಚನಾ ತಿಳಿಸಿದ್ದಾರೆ ಎಂಬುದಾಗಿ ಓಂಕಾರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *