ಕೊಲ್ಕತ್ತಾ : ಪಶ್ಚಿಮ ಬಂಗಾಳದ ಪುರುಲಿಯಾ ರೈಲ್ವೆ ನಿಲ್ದಾಣದಲ್ಲಿ ಚಲಿಸುವ ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವಿನ ಅಂತರಕ್ಕೆ ಬೀಳುತ್ತಿದ್ದ 65 ವರ್ಷದ ವೃದ್ಧರನ್ನು ರಕ್ಷಿಸಿದ ಹಿನ್ನೆಲೆಯಲ್ಲಿ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್)ಯ ಕಾನ್‌ಸ್ಟೆಬಲ್ ಪಲ್ಲವಿ ಬಿಸ್ವಾಸ್ ಅವರಿಗೆ ಜೀವನ್ ರಕ್ಷಾ ಪದಕ ಪ್ರಶಸ್ತಿ ಘೋಷಿಸಲಾಗಿದೆ.

ಈ ಮಾಹಿತಿಯನ್ನು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್ ಇಂಡಿಯಾ) ಸಿಸಿಟಿವಿ ದೃಶ್ಯಗಳೊಂದಿಗೆ ಎಕ್ಸ್​ನಲ್ಲಿ ಹಂಚಿಕೊಂಡಿದೆ. ಇದರಲ್ಲಿ ಚಲಿಸುವ ರೈಲನ್ನು ಹತ್ತಲು ಪ್ರಯತ್ನಿಸುತ್ತಿದ್ದಾಗ ವೃದ್ಧರೊಬ್ಬರು ಎಡವಿ ಬೀಳುವುದನ್ನು ನೋಡಬಹುದು. ರೈಲಿನಡಿ ಸಿಲುಕುತ್ತಿದ್ದ ಅವರನ್ನು ತಕ್ಷಣ ಓಡಿ ಬಂದ ಪಲ್ಲವಿ ಕಾಪಾಡಿದ್ದಾರೆ. ರಾಷ್ಟ್ರೀಯ ಗೌರವವಾದ ಜೀವನ ರಕ್ಷಾ ಪದಕವನ್ನು ಇತರರನ್ನು ಉಳಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟ ವ್ಯಕ್ತಿಗಳಿಗೆ ನೀಡಲಾಗುತ್ತದೆ.

Leave a Reply

Your email address will not be published. Required fields are marked *