ಕಾರವಾರ : ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಉಡುಪಿ ಜಿಲ್ಲೆಯ ಮಲ್ಪೆ ಮೂಲದ ಸೀ ಹಂಟರ್ ಹೆಸರಿನ ಬೋಟ್‌ನ ತಳಭಾಗದ ಕಬ್ಬಿಣದ ವೆಲ್ಡಿಂಗ್ ಬಿಟ್ಟು ಹೋದ ಪರಿಣಾಮ ಮುಳುಗಿದೆ. ಬೋಟ್‌ನಲ್ಲಿದ್ದ 8 ಜನ ಮೀನುಗಾರರನ್ನು ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದಾರೆ.

ಮಲ್ಪೆಯಿಂದ ಮಹಾರಾಷ್ಟ್ರದ ಕಡೆ ಈ ಬೋಟ್ ಚಲಿಸುತಿತ್ತು. ಕಾರವಾರದಿಂದ 9 ನಾಟಿಕನ್ ಮೈಲುದೂರದ ಲೈಟ್ ಹೌಸ್ ಬಳಿ ಚಲಿಸುತಿದ್ದ, ವೇಳೆ ಬೋಟ್ ತಳಭಾಗದ ಕಬ್ಬಿಣದ ಭಾಗದಲ್ಲಿ ವೆಲ್ಡಿಂಗ್ ಬಿಟ್ಟುಹೋಗಿದೆ. ವೆಲ್ಡಿಂಗ್ ಬಿಟ್ಟುಹೋದ ಪರಿಣಾಮ ಬೋಟ್ ಇಂಜಿನ್ ಭಾಗಕ್ಕೆ ನೀರು ತುಂಬಿದೆ.

ತಕ್ಷಣವೇ ಸ್ಥಳೀಯ ಮೀನುಗಾರರು 8 ಜನ ಮೀನುಗಾರರನ್ನು ರಕ್ಷಣೆ ಮಾಡಲಾಗಿದ್ದು, ಮುಳುಗುವ ಹಂತದಲ್ಲಿದ್ದ, ಬೋಟ್‌ನ್ನು ದಡಕ್ಕೆ ತರಲು ಪ್ರಯತ್ನ ಪಟ್ಟರೂ, ಮಾರ್ಗ ಮಧ್ಯದಲ್ಲೇ ಬೋಟ್ ಮುಳುಗಡೆಯಾಗಿದೆ. ಬೋಟ್ ಮುಳುಗಡೆಯಿಂದ 1 ಕೋಟಿ ರೂ.ಗೂ ಹೆಚ್ಚು ನಷ್ಟವಾಗಿದೆ ಎಂದು ಮಾಹಿತಿ ವರದಿಯಾಗಿದೆ.

Leave a Reply

Your email address will not be published. Required fields are marked *