ಬಿಹಾರ : ಯುವಕನೊಬ್ಬನಿಗೆ ಆಕೆಸ್ಟ್ರಾ ಡ್ಯಾನ್ಸರ್ ಮೇಲೆ ಪ್ರೀತಿ ಚಿಗುರಿತ್ತು, ಕಾರ್ಯಕ್ರಮ ನಡೆಯುತ್ತಿರುವಾಗಲೇ ವೇದಿಕೆಗೆ ತೆರಳಿ ಆಕೆಯ ಹಣೆಗೆ ಸಿಂಧೂರವಿಟ್ಟು ಅಲ್ಲೇ ಮದುವೆಯಾಗಿರುವ ವಿಡಿಯೋ ವೈರಲ್ ಆಗಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ಆತ ನೃತ್ಯ ಮಾಡುತ್ತಿದ್ದ, ಯುವತಿ ಬಳಿ ಬಂದು ಹಣೆಗೆ ಸಿಂಧೂರವಿಟ್ಟು, ಆತನ ಕೈಯಲ್ಲಿರುವ ಬಿಳಿ ಬಟ್ಟೆಯೊಂದನ್ನು ಘುಂಗಟ್ ಆಗಿ ಮಾಡಿಕೊಂಡು ಆಕೆಯನ್ನು ಅಪ್ಪಿಕೊಳ್ಳುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಆ ವ್ಯಕ್ತಿ ಅವಳನ್ನು ಪ್ರೀತಿಸಿ ‘ಸಿಂಧೂರ’ ಹಚ್ಚಿ ಅವಳ ತಲೆಯನ್ನು ‘ಘುಂಗಟ್’ ಅಡಿಯಲ್ಲಿ ಮುಚ್ಚುವ ಮೂಲಕ ಮದುವೆಯಾದ ನಂತರ, ಆ ಘಟನೆಗೆ ಆ ಹುಡುಗಿಯ ಪ್ರತಿಕ್ರಿಯೆಯನ್ನು ಕ್ಯಾಮೆರಾ ಸೆರೆಹಿಡಿಯಿತು. ಆ ಹುಡುಗಿ ನಡೆದ ಘಟನೆಯಿಂದ ಸಂತೋಷಗೊಂಡಂತೆ ಕಾಣುತ್ತಿದ್ದು, ಹಾಗೂ ಅವಳು ನಗುತ್ತಿರುವ ಮತ್ತು ನಾಚುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು.
ಆರ್ಕೆಸ್ಟ್ರಾ ಡ್ಯಾನ್ಸ್ ಮಾಡುವ ಹುಡುಗಿಯರನ್ನು ಸಾಮಾನ್ಯವಾಗಿ ಜನರು, ವಿಶೇಷವಾಗಿ ಪುರುಷರು ತಪ್ಪು ದೃಷ್ಟಿಯಿಂದ ನೋಡುತ್ತಾರೆ, ಆದರೆ ಈ ಘಟನೆಯು ಜೀವನೋಪಾಯಕ್ಕಾಗಿ ಮಹಿಳೆಯರು ಏನೇ ಮಾಡಿದರೂ ಅವರನ್ನು ಗೌರವಿಸಲಾಗುತ್ತದೆ ಎಂಬುದನ್ನು ಒತ್ತಿ ಹೇಳುತ್ತದೆ. ಆದರೆ ಈ ಮದುವೆಯನ್ನು ಆಕೆ ಒಪ್ಪಿಕೊಂಡಿದ್ದಾಳೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ. ಈ ವಿಡಿಯೋ ಆನ್ಲೈನ್ನಲ್ಲಿ ಅಪ್ಲೋಡ್ ಆಗುತ್ತಿದ್ದಂತೆ, ನೆಟ್ಟಿಗರು ನವವಿವಾಹಿತ ದಂಪತಿಗೆ ಶುಭ ಹಾರೈಸಿದರು. ಅವರು ಡ್ಯಾನ್ಸರ್ ಮತ್ತು ಅವಳನ್ನು ಮದುವೆಯಾದ ವ್ಯಕ್ತಿಗೆ ಆಶೀರ್ವದಿಸಿದರು ಎಂದು ಹೇಳಲಾಗಿದೆ.