ಮೂಡ ಹಗರಣ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟಿರುವುದಕ್ಕೆ ರಾಜ್ಯಪಾಲ ಪಕ್ಷಪಾತಿ ಧೋರಣೆ, ಅಸಂದ್ದಾನಿಕ ನಡೆಯನ್ನು ಖಂಡಿಸಿ, ಹಾಗೂ ಜೆಡಿಎಸ್ ಮತ್ತು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ತಾಲೂಕು ಕಾಂಗ್ರೆಸ್ ಸಮಿತಿ ಮತ್ತು ಪುಟ್ಟು ಅಂಜಿನಪ್ಪ ನೇತೃತ್ವದಲ್ಲಿ ರಾಜ್ಯಪಾಲರ ವಿರುದ್ಧ ಬೃಹತ್ ಪ್ರತಿಭಟನೆಯನ್ನು ನಡೆಸಲಾಯಿತು,

ಇನ್ನು ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ನಗರದ ಇಂದಿರಾ ಕ್ಯಾಂಟೀನ್ ನಿಂದ ಹಿಡಿದು ತಾಲೂಕು ಕಚೇರಿ ವರೆಗೂ ಪ್ರತಿಭಟನ ಮೆರವಣಿಗೆ ನಡೆಸಿ ರಾಜ್ಯಪಾಲರ ವಿರುದ್ಧ ಆಕ್ರೋಶ ಹೊರಹಾಕಿದ್ದಲ್ಲದೆ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾವಚಿತ್ರಕ್ಕೆ ಮಸಿ ಬಳಿದು ವಿರೋಧ ವ್ಯಕ್ತಪಡಿಸಿದ್ರು,

ಇನ್ನು ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಒಂದು ಹಸಿ ಸುಳ್ಳನ್ನು ಸೃಷ್ಟಿ ಮಾಡಿಕೊಂಡು , ರಾಜ್ಯದಲ್ಲಿ ಪ್ರಚಾರ ಮಾಡುವಂತದ್ದು ಹಾಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರಿಗೆ ಕಪ್ಪು ಚುಕ್ಕೆ ಬರುವ ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ , ಆದರೆ ಇವರ ಪ್ರಯತ್ನ ಯಶಸ್ಸು ಆಗುವುದಿಲ್ಲ ಸುಳ್ಳನ್ನು ಸತ್ಯ ಅಂದುಕೊಂಡು ಹೊರಟಿರುವ ಬಿಜೆಪಿ ಮುಖಂಡರಿಗೆ ಜಯ ಎಂದಿಗೂ ಸಿಗಲ್ಲ, ಸಿದ್ದರಾಮಯ್ಯ ಅವರಿಗೆ ಈ ಮೂಡ ಹಗರಣದಿಂದ ಯಾವುದೇ ರೀತಿಯಲ್ಲಿ ತೊಂದರೆ ಆಗೋದಿಲ್ಲ, ಉದ್ದೇಶಪೂರ್ವಕವಾಗಿ ರಾಜ್ಯಪಾಲರ ಹುದ್ದೆಯನ್ನು, ಬಿಜೆಪಿಯವರು ತಮ್ಮ ಕೈಗೊಮ್ಮೆಯಂತೆ
ಮಾಡಿಕೊಂಡಿದ್ದಾರೆ,ಅದು ನಮಗೆ ಎದ್ದು ಕಾಣುತ್ತಿದೆ, ಇನ್ನು ಬಿಜೆಪಿಯವರ ಕೈಗೊಂಬೆಯಾಗಿರುವ ರಾಜ್ಯಪಾಲರು ತರಾತುರಿಯಾಗಿ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದು ಅಸಂವಿಧಾನಿಕ ನಡೆಯಾಗಿದೆ.

ಇನ್ನು ರಾಜ್ಯಪಾಲರ ಟೇಬಲ್ ಮೇಲೆ ಸಾಕಷ್ಟು ಹಗರಣಗಳ ದಾಖಲೆಗಳ ಸಮೇತ ಇದೆ, ಕುಮಾರಸ್ವಾಮಿ, ಮುರುಗೇಶ್ ನಿರಾಣಿ , ಶಶಿಕಲಾ ಜೊಲ್ಲೆ , ಬಿಟ್ ಕಾಯಿನ್ ವಿಚಾರದಲ್ಲೂ ಇದೆ, ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ವಿಚಾರದಲ್ಲೂ ಇದೆ ಆದರೆ ಇವೆಲ್ಲರ ಬಗ್ಗೆ ಸಮಗ್ರ ತನಿಖೆ ಮಾಡುವಂತದ್ದು, ಇದನ್ನು ಪ್ರಾಸಿಕ್ಯೂಷನ್ ಗೆ ಅವಕಾಶ ಮಾಡಿಕೊಡಬೇಕಾಗಿತ್ತು, ಆದರೆ ಈ ಯಾವ ಕೆಲಸನೋ ಅವರು ಮಾಡಿಲ್ಲ, ಅವರು ಬಿಜೆಪಿಯಲ್ಲಿ ಗುರುತಿಸಿಕೊಂಡಿರುವಂತಹ ಮುಖಂಡರು, ಆದರೆ ರಾಜ್ಯಪಾಲರು ಸಿದ್ದರಾಮಯ್ಯ ಅವರಿಗೆ ಶೋಕಸ್ ನೋಟಿಸ್ ಕೊಡ್ತಾರೆ ಅಂದರೆ ಅವರು ಯಾವ ಹಂತದಲ್ಲಿ ಬಿಜೆಪಿಯ ಕೈಗೊಂಬೆ ಎಂದು ನಮಗೆ ತಿಳಿದು ಬಂದಿದೆ.

ಒಟ್ಟಾರೆ ಮೂಡ ಅಗರಣ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಕಷ್ಟ ಎದುರಾಗಿದ್ದು, ಬಿಜೆಪಿಯವರು ಮತ್ತೆ ಜೆಡಿಎಸ್ ತಮ್ಮ ರಾಜಕೀಯ ಲಾಭಕ್ಕಾಗಿ ಸಿದ್ದರಾಮಯ್ಯ ಅವರನ್ನು ವಿನಾಕಾರಣದಿಂದ ಈ ಪ್ರಕರಣದಲ್ಲಿ ಹೇಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಕಾದು ನೋಡೋಣ

Leave a Reply

Your email address will not be published. Required fields are marked *