ಕೆಲವೊಮ್ಮೆ ಮಹಿಳೆಯರು ತುಂಬು ಗರ್ಭಿಣಿಯಾಗಿದ್ದಾಗ ವಾಹನಗಳಲ್ಲಿ ಸಂಚಾರ ಮಾಡುವುದು ತಪ್ಪು‌ಇದು‌ ಕೆಲವೊಮ್ಮೆ ದೊಡ್ಡ ಸಮಸ್ಯೆಯನ್ನೆ ತಂದೊಡ್ಡುತ್ತೆ ಹೀಗಿರುವಾಗ ಚಲಿಸುತ್ತಿರುವ ವಾಹನಗಳಲ್ಲಿಯೇ ಹೆರಿಗೆಯಾಗಿರುವಂತಹ ಘಟನೆಗಳ ಬಗ್ಗೆ ಕೇಳಿರುತ್ತೇವೆ. ಚಲಿಸುತ್ತಿರುವ ಆಟೋ, ಬಸ್, ಆಂಬ್ಯುಲೆನ್ಸ್ ಗಳಲ್ಲಿ ಅದೆಷ್ಟೋ ಗರ್ಭಿಣಿಯರಿಗೆ ಹೆರಿಗೆ ನಡೆದ ಘಟನೆಗಳೂ ನಡೆದಿದೆ. ಇದೀಗ ಅಂತದೊಂದು ಘಟನೆ ಬೆಳಕಿಗೆ ಬಂದಿದೆ, ಹೌದು ಟಿ.ಜಿ.ಎಸ್.ಆರ್‍.ಟಿ.ಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿಗೆ ಮಾರ್ಗಮಧ್ಯೆಯೇ ನೋವು ಕಾಣಿಸಿಕೊಂಡಿದ್ದು ಸಮಯಕ್ಕೆ ಸರಿಯಾಗಿ ದೇವರಂತೆ ಬಂದ ಬಸ್ ನಿರ್ವಾಹಕಿ ಹಾಗೂ ನರ್ಸ್ ಹೆರಿಗೆ ಮಾಡಿಸಿ ಮಾನವೀಯತೆ ಮೆರೆದ ಘಟನೆ ನಡೆದಿದೆ. ಈ ಘಟನೆ ತೆಲಂಗಾಣದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.

ಇತ್ತೀಚಿಗಷ್ಟೆ ಕೇರಳದ ತ್ರಿಶೂರ್‍ ಜಿಲ್ಲೆಯಲ್ಲಿ ಚಲಿಸುತ್ತಿದ್ದ ಬಸ್ ನಲ್ಲಿಯೇ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿದ ಸುದ್ದಿಯೊಂದು ವೈರಲ್ ಆಗಿತ್ತು. ಇದೀಗ ಅಂತಹುದೇ ಘಟನೆಯೊಂದು ತೆಲಂಗಾಣದಲ್ಲಿ ನಡೆದಿದೆ. ಬಸ್ ನಲ್ಲಿದ್ದ ಮಹಿಳಾ ಕಂಡಕ್ಟರ್ ಹಾಗೂ ನರ್ಸ್ ಒಬ್ಬರು ಮಹಿಳೆಗೆ ಅದೇ ಬಸ್ಸಿನಲ್ಲಿ ಯಾವುದೇ ತೊಂದರೆಯಾಗದಂತೆ ಸುಸೂತ್ರವಾಗಿ ಹೆರಿಗೆ ಮಾಡಿಸಿದ್ದಾರೆ. ಈ ಸುದ್ದಿ ಇದೀಗ ಭಾರೀ ವೈರಲ್ ಆಗುತ್ತಿದೆ. ತೆಲಂಗಾಣದಲ್ಲಿ ಈ ಘಟನೆ ನಡೆದಿದ್ದು, ಗರ್ಭಿಣಿಯನ್ನು ಸಂಧ್ಯಾ ಎಂದು ಹೇಳಲಾಗಿದೆ. ಸಂಧ್ಯಾ ತನ್ನ ಕುಟುಂಬದೊಂದಿಗೆ ತನ್ನ ಅಣ್ಣನಿಗೆ ರಾಖಿ‌ಕಟ್ಟಿ ರಕ್ಷಾ ಬಂಧನವನ್ನು ಆಚರಿಸಲು ಮಹಬೂಬ್ ನಗರ ಜಿಲ್ಲೆಯ ವನಪರ್ತಿಗೆ ಹೋಗುತ್ತಿದ್ದರು.

ಬಸ್ ಇನ್ನೇನು ನಾಚಹಳ್ಳಿ ಎಂಬಲ್ಲಿಗೆ ಹೋಗುತ್ತಿದ್ದಂತೆ ಸಂಧ್ಯಾಳಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಹೆರಿಗೆ ನೋವಿನಿಂದ ನರಳುತ್ತಿರುವುದನ್ನು ಕಂಡುಕೊಂಡ ಮಹಿಳಾ ಕಂಡಕ್ಟರ್‍ ಜಿ.ಭಾರತಿ ಅಲ್ಲಿಯೇ ಬಸ್ ನಿಲ್ಲಿಸಿದ್ದಾರೆ. ಇದೇ ಸಮಯದಲ್ಲಿ ಆಕೆ ಬಸ್ ನಲ್ಲಿದ್ದ ನರ್ಸ್ ಸಹಾಯದಿಂದ ಗರ್ಭಿಣಿಗೆ ಸುಸೂತ್ರವಾಗಿ ಹೆರಿಗೆ ಮಾಡಿಸಿದ್ದಾಳೆ. ಇನ್ನೂ ಮಹಿಳೆ ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಬಳಿಕ ತಾಯಿ ಹಾಗೂ ಮಗುವನ್ನು ಆಂಬ್ಯುಲೆನ್ಸ್ ಮೂಲಕ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಹೇಳಲಾಗಿದೆ. ಇನ್ನೂ ಟಿ.ಜಿ.ಎಸ್.ಆರ್‍.ಟಿ.ಸಿ ಸಾರಿಗೆ ಅಧಿಕಾರಿಗಳು ಬಸ್ ಕಂಡಕ್ಟರ್‍ ಭಾರತಿ ರವರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *