ಬೆಂಗಳೂರು : 2 ಕೋಟಿ ಸಾಲ ತೀರಿಸಲಾಗದೇ ವ್ಯಕ್ತಿಯೊಬ್ಬ ನಗರದ ಮಂತ್ರಿ ಮಾಲ್‌ ಒಳಗೆ 2ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಉಲ್ಲಾಳ ಉಪನಗರದ ನಿವಾಸಿ ಮಂಜುನಾಥ್ (55) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ. ವ್ಯಕ್ತಿ 2 ಕೋಟಿ ಸಾಲ ಮಾಡಿಕೊಂಡಿದ್ದರು. ನೆನ್ನೆ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಲ್ಲೇಶ್ವರಂ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮಂಜುನಾಥ್‌ ಎಲೆಕ್ಟ್ರಿಕಲ್ ಅಂಗಡಿ ಇಟ್ಟುಕೊಂಡಿದ್ದರು. 2 ಕೋಟಿ ಸಾಲ‌ ಮಾಡಿಕೊಂಡಿದ್ದೇನೆ. ಅದನ್ನ ಈ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ. ನನ್ನ ಸಾವಿಗೆ ಯಾರೂ ಕಾರಣರಲ್ಲ. ನನ್ನ ಸಾವಿಗೆ ನಾನೇ ಕಾರಣ. ನನ್ನ ಜೀವನದಲ್ಲಿ ನೊಂದಿದ್ದೀನಿ. ಸಾಲ ತೀರಿಸಲು ತುಂಬಾ ಪ್ರಯತ್ನ ಮಾಡಿದೆ. ಸದ್ಯದ ಪರಿಸ್ಥಿಯಲ್ಲಿ ಸಾಲ ತೀರಿಸುವುದಕ್ಕೆ ಆಗುತ್ತಿಲ್ಲ. ಸಾಲ ಕೊಟ್ಟವರು ಎಲ್ಲ ಕ್ಷಮಿಸಿ ಎಂದು ಡೆತ್‌ನೋಟ್‌ನಲ್ಲಿ ಮನೆಯವರ ನಂಬರ್‌ಗಳನ್ನೆಲ್ಲ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾರೆ.

Leave a Reply

Your email address will not be published. Required fields are marked *