ಮನುಷ್ಯ ಅಂದಮೆಲೆ ಸಾವು ಕಟ್ಟಿಟ್ಟ ಬುತ್ತಿ ಅಂತಲೇ ಹೇಳಬಹುದು. ಆ ಸಾವು ಯಾರಿಗೆ ಯಾವಾಗಾ ಹೇಗೆ ಬರುತ್ತೆ ಅಂತ ಹೇಳೋದು ಅಸಾಧ್ಯ. ಕೆಲವೊಮ್ಮೆ ಅದೆಷ್ಟೋ ಸಾವಿನ ಬಾಗಿಲು ತಟ್ಟಿ ಬಂದು ಬದುಕಿದ್ದಾರೆ. ಅದೇ ಮಾದರಿಯಲ್ಲಿ ಖುಷಿಯಾಗಿ ಎಲ್ಲರೊಂದಿಗೆ ಚೆನ್ನಾಗಿರುವಂತವರೇ ಯಾವುದೇ ಸುಳಿವಿಲ್ಲದೆ ಕ್ಷಣಾರ್ಧದಲ್ಲೇ ಸಾವನ್ನಪ್ಪಿರುವಂತಹ ಘಟನೆಗಳೂ ಸಹ ನೋಡಿರಬಹುದು. ಇದೀಗ ಅಂತಹದೇ ಘಟನೆಯೊಂದು ನಡೆದಿದೆ. ಸರ್ಕಾರಿ ಶಾಲೆಯ ಶಿಕ್ಷಕ ನೋಡ ನೋಡುತ್ತಲೇ ಕುಸಿದು ಬಿದ್ದು ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಈ ಸಂಬಂಧ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ರಾಜಸ್ಥಾನದ ಜೈಪುರ ಜಿಲ್ಲೆಗೆ ಸೇರಿದ ಕಿಷ್ಣಗಡ್-ರೆನ್ವಾಲ್ ಎಂಬ ಪ್ರದೇಶದ ಸರ್ಕಾರಿ ಟೀಚರ್ ಮಂಗಲ್ ಝಕರ್ ಇತ್ತೀಚಿಗಷ್ಟೆ ಕೆಲಸದಿಂದ ನಿವೃತ್ತಿ ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಸ್ಥಳೀಯವಾಗಿ ಮನರಂಕನೆಯ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮಕ್ಕೆ ಹತ್ತಿರದ ಸಂಬಂಧಿಗಳು ಹಾಗೂ ಸ್ನೇಹಿತರು ಭಾಗವಹಿಸಿದ್ದರು. ಮಂಗಲ್ ಜಖರ್ ರವರ ಸ್ವಂತ ಸಹೋದರ ಮನ್ನಾರಾಮ್ ಜಖರ್ ಕುಟುಂಬ ಈ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಅಣ್ಣನ ರಿಟೈರ್ ಮೆಂಟ್ ಕಾರ್ಯಕ್ರಮವನ್ನು ಭಾಗಿಯಾಗಲು ಬಂದಿದ್ದರು. ಕಳೆದ ಭಾನುವಾರ ರಾತ್ರಿ ಸಂಭ್ರಮದ ಅಂಗವಾಗಿ ಎಲ್ಲರೂ ಸಂಭ್ರಮದಿಂದ ನೃತ್ಯ ಮಾಡುತ್ತಿದ್ದರು.
ಕುಟುಂಬಸ್ಥರು ನೃತ್ಯ ಮಾಡುತ್ತಿದ್ದರು, ಎಲ್ಲರಲ್ಲೂ ಸಂಭ್ರಮ ಮನೆಮಾಡಿತ್ತು ಮಧ್ಯರಾತ್ರಿ ಸರಿಸುಮಾರು 12 ಗಂಟೆಯ ಸಮಯದಲ್ಲಿ ಮತ್ತೊಂದು ಹಾಡಿಗೆ ನೃತ್ಯ ಮಾಡಲು ರಾಮ್ ಜಖರ್ ಶುರು ಮಾಡಿದರು. ಬಳಿಕ ನೃತ್ಯವಾಡುತ್ತಲೇ ಆತನಿಗೆ ಹೃದಯಾಘಾತ ಸಂಭವಿಸಿದೆ. ನೃತ್ಯ ಆರಂಭಿಸಿದ 2 ನಿಮಿಷದಲ್ಲೇ ಆತ ಕುಸಿದು ಕೆಳಗೆ ಬಿದ್ದಿದ್ದಾನೆ. ಬಳಿಕ ಗಾಬರಿಗೊಂಡ ಕುಟುಂಬಸ್ಥರು 10 ನಿಮಿಷಗಳ ಕಾಲ ಸಿಪಿಆರ್ ಮಾಡಿದ್ದಾರೆ. ಆದರೂ ಸಹ ಆತನಲ್ಲಿ ಯಾವುದೇ ರೀತಿಯ ಚೇತರಿಕೆ ಕಾಣಿಸದ ಹಿನ್ನೆಲೆಯಲ್ಲಿ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅದಾಗಲೇ ಮನ್ನಾರಾಮ್ ಮೃತಪಟ್ಟಿದ್ದಾಗಿ ಎಂದು ವೈದ್ಯರು ಖಚಿತಪಡಿಸಿದರು. ಇನ್ನೂ ಈ ಘಟನೆ ಅವರ ಕುಟುಂಬಸ್ಥರು ಸೇರಿದಂತೆ ಸ್ಥಳೀಯರಿಗೆ ತೀವ್ರ ವಿಷಾದ ತಂದೊಡ್ಡಿದೆ.