School Love Story – ಪ್ರೇಯಸಿಗೆ ದುಬಾರಿ ಬೆಲೆಯ ಐಪೋನ್ ಗಿಫ್ಟ್ ಕೊಡಲು 9ನೇ ತರಗತಿಯ ಬಾಲಕನೋರ್ವ ತನ್ನ ತಾಯಿಯ ಆಭರಣಗಳನ್ನೇ ಮಾರಿಬಿಟ್ಟಿದ್ದಾನೆ. ಯಾರಿಗೂ ತಿಳಿಯದಂತೆ ಬಂಗಾರದ ಆಭರಣಗಳನ್ನು ಯಾರಿಗೂ ತಿಳಿಯದೇ ಮಾರಿಬಿಟ್ಟಿದ್ದಾನೆ. ಬಳಿಕ ಮೊಬೈಲ್ ಅಂಗಡಿಗೆ ಹೋಗಿ ದುಬಾರಿ ಐಪೋನ್ ಖರೀದಿ ಮಾಡಿದ್ದಾನೆ. ಐಪೋನ್ ಖರೀದಿಸಿ ತನ್ನ ಪ್ರೇಯಸಿಗೆ ಉಡುಗೊರೆಯಾಗಿ ನೀಡಿದ್ದಾನೆ. ಇನ್ನೂ ಈ ವಿಚಾರ ಪೊಲೀಸರವರೆಗೂ ತಲುಪಿದ್ದು, ವಿಚಾರಣೆ ನಡೆಸಿದಾಗ ಬಾಲಕ ಸಿಕ್ಕಿಬಿದಿದ್ದಾನೆ.
ದೆಹಲಿಯ ಶಾಲೆಯೊಂದರಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಯೊಬ್ಬ ತನ್ನ ಗರ್ಲ್ ಫ್ರೆಂಡ್ ಹುಟ್ಟುಹಬ್ಬದಕ್ಕಾಗಿ ಐಪೋನ್ ಗಿಫ್ಟ್ ಕೊಡಲು ಸಖತ್ ಪ್ಲಾನ್ ಮಾಡಿದ್ದಾನೆ. ಆದರೆ ದುಬಾರಿಯಾದ ಐಪೋನ್ ಖರೀದಿಸಲು ಹಣಕ್ಕಾಗಿ ತನ್ನ ತಾಯಿಯ ಬಳಿ ಕೇಳಿದ್ದಾನೆ. ಆದರೆ ತಾಯಿ ಹಣ ನೀಡಲು ನಿರಾಕರಿಸಿದ್ದಾಳೆ. ಆದರೆ ಏನಾದರೂ ಮಾಡಿ ಐಪೋನ್ ಖರೀದಿಸಿ ಗರ್ಲ್ ಫ್ರೆಂಡ್ ಗೆ ಕೊಡಬೇಕು ಆಕೆಯನ್ನ ಖುಷಿಪಡಿಸಬೇಕೆಂದು ನಿರ್ಧರಿಸಿ ಕಳ್ಳತನ ಮಾಡಲು ಮುಂದಾಗಿದ್ದಾನೆ. ಮನೆಯಲ್ಲಿದ್ದ ತಾಯಿಯ ಬಂಗಾರದ ಆಭರಣಗಳನ್ನೇ ಕಳ್ಳತನ ಮಾಡಿ ಮಾರಿಬಿಟ್ಟಿದ್ದಾನೆ. ಮನೆಯಲ್ಲಿದ್ದ ಎರಡು ಬಂಗಾರದ ಚೈನ್, ಕಿವಿಯೋಲೆ ಕಳ್ಳತನ ಮಾಡಿದ್ದಾನೆ. ಇನ್ನೂ ಮನೆಯಲ್ಲಿನ ಬಂಗಾರ ಕಾಣೆಯಾದ ಕೂಡಲೇ ಆ ತಾಯಿ ಪೊಲಿಸರಿಗೆ ದೂರು ನೀಡಿದ್ದಾಳೆ.
ಇನ್ನೂ ದೂರು ದಾಖಲಿಕೊಂಡ ಪೊಲೀಸರು ಬಾಲಕನ ಮನೆಯ ಹತ್ತಿರದಲ್ಲಿರುವ ಸಿಸಿಟಿವಿಯನ್ನ ಪರಿಶೀಲನೆ ಮಾಡಿದ್ದಾರೆ. ಮನೆಯ ಅಕ್ಕಪಕ್ಕದವರನ್ನು ವಿಚಾರಣೆ ಮಾಡಿದಾಗ ಹೊರಗಿನ ವ್ಯಕ್ತಿಗಳು ಯಾರೂ ಬಂದಿಲ್ಲ ಅಲ್ಲದೇ ಈ ಕೆಲಸ ಮಾಡಿರಲ್ಲ ಎಂಬ ಅಭಿಪ್ರಾಯ ಪೊಲೀಸರಿಗೆ ಬಂದಿದೆ. ಜೊತೆಗೆ ಮಹಿಳೆಯ ಮಗನ ಮೇಲೆ ಪೊಲೀಸರಿಗೆ ಅನುಮಾನ ದುಪ್ಪಟ್ಟಾಗಿದೆ. ಕೂಡಲೇ ಬಾಲಕನ ಸ್ನೇಹಿತರನ್ನು ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಹೊರಬಿದ್ದಿದೆ. ಮಹಿಳೆಯ ಮಗನೆ ಮನೆಯಲ್ಲಿದ್ದ ಬಂಗಾರವನ್ನು ಕಳ್ಳತನ ಮಾಡಿ, ಅದನ್ನು ಇನ್ನೆಲ್ಲೊ ಮಾರಿ 50 ಸಾವಿರ ಬೆಲೆಯ ಐಪೋನ್ ಖರೀದಿ ಮಾಡಿ, ಆತನ ಗರ್ಲ್ ಫ್ರೆಂಡ್ ಗೆ ಗಿಫ್ಟ್ ಕೊಟ್ಟಿದ್ದಾನೆ ಎಂದು ಬಾಲಕನ ಸ್ನೇಹಿತರು ತಿಳಿಸಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ಬಾಲಕನ ತಾಯಿ ಶಾಕ್ ಆಗಿದ್ದಾರೆ.