ಪಶ್ಚಿಮ ಬಂಗಾಳ : ಪಶ್ಚಿಮ ಬಂಗಾಳದ ಕಾಲೇಜಿನ ತರಗತಿಯಲ್ಲೇ ಮಹಿಳಾ ಪ್ರಾಧ್ಯಾಪಕರೊಬ್ಬರು ವಿದ್ಯಾರ್ಥಿಯನ್ನು ಮದುವೆಯಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಾಧ್ಯಾಪಕಿ ಪ್ರಥಮ ವರ್ಷದ ವಿದ್ಯಾರ್ಥಿಯನ್ನು ಮದುವೆಯಾಗಿದ್ದಾರೆ. ಇದು ವೈರಲ್ ಆಗುತ್ತಿದ್ದಂತೆ ಪ್ರಾಧ್ಯಾಪಕರನ್ನು ರಜೆಯ ಮೇಲೆ ಕಳುಹಿಸಿರುವ ಆಡಳಿತ ಇದು ಪ್ರಾಜೆಕ್ಟ್​ನಲ್ಲಿ ಭಾಗವಾಗಿತ್ತು ಎಂದು ಹೇಳಿದ್ದಾರೆ.

ಬಂಗಾಳದ ಹರಿಂಗಟಾದಲ್ಲಿರುವ ಮೌಲಾನಾ ಅಬುಲ್ ಕಲಾಂ ಆಜಾದ್ ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ಈ ಘಟನೆ ನಡೆದಿದೆ. ಅಪ್ಲೈಡ್ ಸೈಕಾಲಜಿ ವಿಭಾಗದ ಅಧ್ಯಾಪಕರೊಬ್ಬರು ವಧುವಿನಂತೆ ಬಟ್ಟೆ ಧರಿಸಿ, ಹೂಮಾಲೆಯನ್ನು ಪರಸ್ಪರ ಹಾಕಿಕೊಳ್ಳುವುದನ್ನು ವಿಡಿಯೋದಲ್ಲಿ ಕಾಣಬಹುದು. ಆತ ಆಕೆಯ ಹಣೆಗೆ ಸಿಂಧೂರ ಇಟ್ಟಿದ್ದಾನೆ.

ವಿದ್ಯಾರ್ಥಿ ಮತ್ತು ಪ್ರಾಧ್ಯಾಪಕರ ಜೊತೆಗೆ ಮೂವರು ಸಾಕ್ಷಿಗಳು ಸಹಿ ಮಾಡಿದ ಕೈಬರಹದ ಪ್ರಮಾಣಪತ್ರವೂ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಆದರೆ ಇದು ಕಾಲೇಜಿನ ಪ್ರಾಜೆಕ್ಟ್​ನ ಒಂದು ಭಾಗ ಎಂದು ಪ್ರಾಧ್ಯಾಪಕರು ಹೇಳಿದ್ದಾರೆ. ಈ ವೀಡಿಯೊ ಪ್ರಸಾರವಾದ ನಂತರ, ವಿಶ್ವವಿದ್ಯಾಲಯದ ಅಧಿಕಾರಿಗಳು ವಿಚಾರಣೆಯನ್ನು ಪ್ರಾರಂಭಿಸಿದರು ಮತ್ತು ಪ್ರಾಧ್ಯಾಪಕರನ್ನು ರಜೆಯ ಮೇಲೆ ಕಳುಹಿಸಿದ್ದಾರೆ.

ಫ್ರೆಷರ್ ಪಾರ್ಟಿ ವೇಳೆ ಈ ಘಟನೆ ನಡೆದಿದೆ, ಇದು ಪ್ರಾಜೆಕ್ಟ್​ನ ಒಂದು ಭಾಗವಾಗಿತ್ತು, ನಮ್ಮ ಕಾಲೇಜಿನ ಪ್ರತಿಷ್ಠೆಗೆ ಧಕ್ಕೆ ತರಲು ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ. ಅದಕ್ಕೆ ಕಾರಣರಾದವರ ವಿರುದ್ಧ ಪೊಲೀಸ್ ದೂರು ದಾಖಲಿಸಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ. ನಾವು ಫ್ರೆಷರ್ ಪಾರ್ಟಿಗಾಗಿ ಯೋಜಿಸಿದ್ದ ನಾಟಕ. ಇದನ್ನು ನನ್ನ ವಿರುದ್ಧದ ಪಿತೂರಿಯ ಭಾಗವಾಗಿ ಉದ್ದೇಶಪೂರ್ವಕವಾಗಿ ವೈರಲ್ ಮಾಡಲಾಗಿದೆ.

ನನ್ನ ಮಾನಹಾನಿ ಮಾಡಲು ಪ್ರಯತ್ನಿಸಿದವರ ವಿರುದ್ಧ ನಾನು ಪೊಲೀಸ್ ದೂರು ನೀಡುತ್ತೇನೆ ಎಂದು ಪ್ರಾಧ್ಯಾಪಕಿ ಕೂಡ ಹೇಳಿದ್ದಾರೆ. ಯಾವುದೇ ಅನುಚಿತತೆ, ಅನೈತಿಕ ನಡವಳಿಕೆ ಇಲ್ಲ ಮತ್ತು ಇದು ಸಂಪೂರ್ಣವಾಗಿ ಕಾಲೇಜಿಗೆ ಸಂಬಂಧ ಪಟ್ಟ ನಾಟಕದ ಭಾಗವಾಗಿತ್ತು ಎಂದು ಸಮರ್ಥಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *