ಹಾಳಾದ ಸಾಮಾಜಿಕ ಪಿಡುಗುಗಳಲ್ಲಿ ಒಂದಾದದ್ದು ಈ ಬಾಲ್ಯ ವಿವಾಹ, ಹೌದು ಈ ಬಾಲ್ಯ ವಿವಾಹದ ಕುರಿತು ಸರ್ಕಾರ, ಸಂಘ ಸಂಸ್ಥೆಗಳ ಮೂಲಕ ಅರಿವು ಮೂಡಿಸುತ್ತಿದ್ದರೂ ಕೂಡಾ ಅನೇಕ ಕಡೆ ಇನ್ನೂ ಈ ಬಾಲ್ಯ ವಿವಾಹಗಳು ನಡೆಯುತ್ತಲೇ ಇವೇ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳಿಗೆ ಬಲವಂತವಾಗಿ ಮದುವೆ ಮಾಡುವಂತಹ ನೈಜ ಘಟನೆಗಳ ಬಗ್ಗೆ ಕೇಳಿರುತ್ತೇವೆ. ಇದೀಗ ಅಂತಹದೊಂದೆ ಸುದ್ದಿಯೊಂದು ಮತ್ತೊಮ್ಮೆ ನಡೆದಿದೆ. 12 ವರ್ಷದ ಬಾಲಕಿಗೆ 62 ವರ್ಷದ ವೃದ್ಧನೊಂದಿಗೆ ಬಾಲಕಿಯ ಮನೆಯವರೇ ಹಾಗೂ ಕುಟುಂಬಸ್ಥರು ಮದುವೆ ಮಾಡಲು ಮುಂದಾಗಿದ್ದಾರೆ. ಈ ಸಂಬಂಧ ಇದರ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ಈಗ ವೈರಲ್ ಆಗುತ್ತಿರುವ ವಿಡಿಯೋ ಒಂದರಲ್ಲಿ 12 ವರ್ಷದ ಬಾಲಕಿಯನ್ನು 62 ವರ್ಷದ ಹಣ್ಣಣ್ ಮುದುಕನೊಂದಿಗೆ ಮದುವೆ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಆ ಪುಟ್ಟ ಬಾಲಕಿ ಬೇಡ ಬೇಡ ಅಂತಾ ಅಳುತ್ತಾ ಎಷ್ಟೇ ಕೇಳಿಕೊಂಡರೂ ಕ್ಯಾರೆ ಅನ್ನದೇ ಆಕೆಯ ಮನೆಯವರು ಮದುವೆ ಮಾಡಲು ಮುಂದಾಗಿದ್ದಾರೆ. ಆದರೆ ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಈ ವಿಡಿಯೋವನ್ನು TaraBull ಹೆಸರಿನ ಎಕ್ಸ್ ಖಾತೆಯಲ್ಲಿ ಈ ಕುರಿತ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗಿದ್ದು, 12 ವರ್ಷದ ಬಾಲಕಿಯನ್ನು ಆಕೆಯ ಮನೆಯವರೇ 62 ವರ್ಷದ ವೃದ್ಧನೊಂದಿಗೆ ಮದುವೆಯಾಗುವಂತೆ ಹಿಂಸಿಸುತ್ತಿದ್ದಾರೆ. ಇದಕ್ಕೆ ಆಕ್ರೋಷ ಎಲ್ಲಿದೆ ಎಂಬ ಟೈಟಲ್ ಅಡಿಯಲ್ಲಿ ವಿಡಿಯೋ ಹಂಚಿಕೊಂಡಿದ್ದು, ಇದೀಗ ವೈರಲ್ ಆಗುತ್ತಿದೆ.
ಸರಿಯಾಗಿ ನೋಡಿ ಈ ವಿಡಿಯೋದಲ್ಲಿ ಮುದುಕನನ್ನು ಮದುವೆಯಾಗುವಂತೆ ಬಾಲಕಿಯನ್ನು ಒತ್ತಾಯಿಸುತ್ತಿರುವುದು ಹಾಗೂ ಬಾಲಕಿ ಬೇಡ ಬೇಡ ಅಂತಾ ಅಳುತ್ತಾ ಗೋಳಾಡುತ್ತಾ ಹೇಳಿದರೂ , ಅತ್ತರೂ ಮನೆಯವರು ಮದುವೆಗೆ ಸಹಿ ಹಾಕುವಂತೆ ಬಲವಂತ ಮಾಡಿದ್ದಾರೆ. ಆ.15 ರಂದು ಹಂಚಿಕೊಂಡ ಈ ವಿಡಿಯೋ ಬರೊಬ್ಬರಿ 5 ಮಿಲಿಯನ್ ಗೂ ಅಧಿಕವಾಗಿ ವೀಕ್ಷಣೆಗಳನ್ನು ಕಂಡಿದ್ದು, ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಬರೆಯುತ್ತಿದ್ದಾರೆ. ಅನೇಕರು ಈ ವಿಡಿಯೋದಲ್ಲಿ ಬಾಲಕಿಯ ಮದುವೆ ಮಾಡಲು ಬಲವಂತ ಮಾಡಿದವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ.