ತಿರುಪತಿ : ಕಾಲ್ತುಳಿತದಿಂದ ಗಾಯಗೊಂಡ ಗಾಯಾಳುಗಳಿಗೆ ವಿಶೇಷ ದರ್ಶನಕ್ಕೆ ತಿರುಮಲ ತಿರುಪತಿ ದೇವಸ್ಥಾನ ಅವಕಾಶ ಮಾಡಿಕೊಟ್ಟಿದೆ.

ಸಿಎಂ ಚಂದ್ರಬಾಬು ನಾಯ್ಡು ಹಾಗೂ ಡಿಸಿಎಂ ಪವನ್ ಕಲ್ಯಾಣ್ ಸೂಚನೆ‌ ಮೇರೆಗೆ ಸ್ವಿಮ್ಸ್ ಆಸ್ಪತ್ರೆಯಲ್ಲಿರುವ ಗಾಯಾಳುಗಳಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. 20 ಮಂದಿ ಗಾಯಾಳುಗಳುಗಳು ಸರ್ಕಾರಿ ಬಸ್ಸಿನಲ್ಲಿ ಆಸ್ಪತ್ರೆಯಿಂದ ದೇವಾಲಯಕ್ಕೆ ಪ್ರಯಾಣ ಮಾಡಿ ದೇವರ ದರ್ಶನ ಮಾಡಲಿದ್ದಾರೆ.

ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ತಿರುಪತಿ ತಿರುಮಲಕ್ಕೆ ಭಕ್ತ ಸಾಗರವೇ ಹರಿದು ಬಂದಿದೆ. ಕಾಲ್ತುಳಿತದ ಬಳಿಕ ಎಚ್ಚೆತ್ತ ಆಂಧ್ರಪ್ರದೇಶ ಸರ್ಕಾರ ಹಾಗೂ ಟಿಟಿಡಿ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರ ವಹಿಸಿದೆ. ತಿರುಪತಿಯಲ್ಲಿ ನಿರ್ಲಕ್ಷ್ಯ ವಹಿಸಿದ ಅಧಿಕಾರಗಳ ತಲೆದಂಡವಾಗಿದೆ. ಡಿವೈಎಸ್‌ಪಿ ರಮಣಕುಮಾರ್ ಹಾಗೂ ಗೋಶಾಲೆ ಡಿಡಿ ಹರಿನಾಥ ರೆಡ್ಡಿ ಅವರನ್ನು ಆಂಧ್ರಪ್ರದೇಶ ಸರ್ಕಾರ ಅಮಾನತು ಮಾಡಿದೆ.

ಎಸ್‌ಪಿ ಸುಬ್ಬರಾಯಡು ಹಾಗೂ ಇಓ ಗೌತಮಿ, ಸಿಎಸ್ ಓ ಶ್ರೀಧರ್ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿ, ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೇಜವಬ್ದಾರಿತನ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಅಧಿಕಾರಿಗಳ ಮೇಲೆಯೇ ಸರ್ಕಾರ ಹೊಣೆ ಹೊರಿಸಿದೆ.

Leave a Reply

Your email address will not be published. Required fields are marked *