ಮಂಡ್ಯ : ಚೆನ್ನಾಗಿರುವ ರಸ್ತೆಗಳಲ್ಲೂ ಆಕ್ಸಿಡೆಂಟ್ ಆಗುತ್ತಿವೆ. ಹೀಗಾಗಿ ಪ್ರಯಾಣಿಕರು ಎಚ್ಚರಿಕೆಯಿಂದ ವಾಹನ ಚಲಾವಣೆ ಮಾಡಬೇಕು ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ವಿಸಿ ನಾಲೆಗೆ ಕಾರು ಪಲ್ಟಿಯಾಗಿ ಮೂವರು ಸಾವನ್ನಪ್ಪಿರುವ ವಿಚಾರವಾಗಿ ಮೇಲುಕೋಟೆಯಲ್ಲಿ ಮಾತನಾಡಿ, ಮೃತರ ಕುಟುಂಬಕ್ಕೆ ಶಾಸಕ ಗಣಿಗ ರವಿ ವೈಯಕ್ತಿಕವಾಗಿ ಪರಿಹಾರ ನೀಡಿದ್ದಾರೆ. ಹೆಚ್ಚಿನ ಪರಿಹಾರ ಕೊಡಿಸಲು ಸಿಎಂ ಬಳಿ ಮಾತನಾಡಿ ಪ್ರಯತ್ನ ಮಾಡುತ್ತೇನೆ. ಕೆಟ್ಟಿರುವ ರಸ್ತೆಗಳಲ್ಲೂ ಆಕ್ಸಿಡೆಂಟ್ ಆಗುತ್ತವೆ. ಚೆನ್ನಾಗಿರುವ ರಸ್ತೆಗಳಲ್ಲೂ ಆಕ್ಸಿಡೆಂಟ್ ಆಗುತ್ತಿವೆ. ಆದ್ದರಿಂದ ಯುವಕರು ಸ್ವಲ್ಪ ಎಚ್ಚರಿಕೆಯಿಂದ ಪ್ರಯಾಣ ಮಾಡಬೇಕು ಎಂದು ಸಲಹೆ ನೀಡಿದರು.
ಪ್ರಾಣ ಹಾನಿಯಾದಾಗ ಎಷ್ಟೇ ಪರಿಹಾರ ಕೊಟ್ಟರು ಸಹ ಆ ಕುಟುಂಬಕ್ಕೆ ನೆಮ್ಮದಿ ಸಿಗಲು ಸಾಧ್ಯವಿಲ್ಲ. ಯುವಕರೆಲ್ಲರು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು ಎಂದು ಮನವಿ ಮಾಡಿದರು.