ನವದೆಹಲಿ : ಹೊಸ ಉಪಕರಣಗಳ ಖರೀದಿ, ಆಧುನೀಕರಣ ಮತ್ತು ಮೂಲಸೌಕರ್ಯ ಅಭಿವೃದ್ಧಿ, ಬಂಡವಾಳ ವೆಚ್ಚ ಸೇರಿದಂತೆ ರಕ್ಷಣಾ ಕ್ಷೇತ್ರಕ್ಕೆ ಬಜೆಟ್ನಲ್ಲಿ 6.81 ಲಕ್ಷ ಕೋಟಿ ರೂ. ಅನುದಾನ ಘೋಷಣೆ ಮಾಡಲಾಗಿದೆ. ಇದು ಕಳೆದ ವರ್ಷದ ಬಜೆಟ್ನಲ್ಲಿ ರಕ್ಷಣಾ ವಲಯಕ್ಕೆ ನೀಡಿದ ಕೊಡುಗೆಗಿಂತ ತುಸು ಹೆಚ್ಚಾಗಿದೆ.
ಹಣಕಾಸು ಸಚಿವರು ರಕ್ಷಣಾ ಕ್ಷೇತ್ರಕ್ಕೆ ಒಟ್ಟು 6,81,210 ಕೋಟಿ ರೂ. ಅನುದಾನ ಘೋಷಿಸಿದ್ದಾರೆ. ಕಳೆದ ವರ್ಷ ಇದು 6,21,940 ಕೋಟಿ ರೂ. ಆಗಿತ್ತು. ಬಜೆಟ್ನಲ್ಲಿ ಒಟ್ಟು ರಕ್ಷಣಾ ಬಂಡವಾಳ ವೆಚ್ಚವನ್ನು 1,92,387 ಕೋಟಿ ರೂ.ಗಳಿಗೆ ನಿಗದಿಪಡಿಸಲಾಗಿದೆ.
ಇದರಲ್ಲಿ ಪಿಂಚಣಿಗಾಗಿ 1,60,795 ಕೋಟಿ ರೂ, ರಾಜಸ್ವ ವೆಚ್ಚ 4,88,822 ಕೋಟಿ ರೂ. ಇದೆ. ಬಂಡವಾಳ ವೆಚ್ಚದ ಅಡಿಯಲ್ಲಿ ವಿಮಾನ ಮತ್ತು ಏರೋ ಇಂಜಿನ್ಗಳಿಗೆ 48,614 ಕೋಟಿ ರೂ.ಗಳನ್ನು ಮೀಸಲಿಡಲಾಗಿದ್ದು, ನೌಕಾಪಡೆಗೆ 24,390 ಕೋಟಿ ರೂ. ಇತರೆ ಉಪಕರಣಗಳ ಖರೀದಿಗೆ 63,099 ಕೋಟಿ ರೂ. ಘೋಷಿಸಲಾಗಿದೆ.
ಸ್ವಾತಂತ್ರ್ಯದ ನಂತರ ದೇಶದ ಮೊದಲ ಬಜೆಟ್ ಅನ್ನು 26 ನವೆಂಬರ್ 1947 ರಂದು ಆರ್ಕೆ ಷಣ್ಮುಖಂ ಚೆಟ್ಟಿ ಮಂಡಿಸಿದ್ದರು. ಆ ಬಜೆಟ್ನ ಒಟ್ಟು ಗಾತ್ರ ಅಂದರೆ ಒಟ್ಟು ವೆಚ್ಚ 197.39 ಕೋಟಿ ರೂ. ಇತ್ತೆಂದು ಅಂದಾಜಿಸಲಾಗಿದೆ.