ದುಬೈ : ದುಬೈನಲ್ಲಿ ನಡೆದ ಕಾರ್ ರೇಸ್‌ನಲ್ಲಿ ಕಾಲಿವುಡ್ ನಟ ಅಜಿತ್ ಕುಮಾರ್ 3ನೇ ಸ್ಥಾನ ಗಳಿಸಿದ್ದಾರೆ. ಗೆದ್ದ ಸಂಭ್ರಮದಲ್ಲಿ ಪತ್ನಿ ಶಾಲಿನಿಗೆ ಅಜಿತ್ ಮುತ್ತು ಕೊಟ್ಟಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ದುಬೈನಲ್ಲಿ ನಡೆದ 24 ಹೆಚ್ ಸಿರೀಸ್ ಕಾರ್ ರೇಸ್‌ನಲ್ಲಿ ಅಜಿತ್ ಭಾಗವಹಿಸಿದ್ದರು. ಇದಕ್ಕಾಗಿ ಒಂದೂವರೆ ತಿಂಗಳಿಂದ ದುಬೈನಲ್ಲಿ ಪ್ರಾಕ್ಟೀಸ್ ಮಾಡಿದ್ದು, ಹಠ ಬಿಡದೇ ಕಾರ್ ರೇಸ್‌ನಲ್ಲಿ 3ನೇ ಸ್ಥಾನ ಗೆದ್ದು ಬೀಗಿದ್ದಾರೆ. 991 ಕೆಟಗರಿಯಲ್ಲಿ 3ನೇ ಸ್ಥಾನ, ಜಿಟಿ 4 ಕೆಟಗರಿಯಲ್ಲಿ ‘ಸ್ಪಿರಿಟ್ ಆಫ್ ದಿ ರೇಸ್’ ಪ್ರಶಸ್ತಿ ಪಡೆದಿದ್ದಾರೆ.
ಈ ಗೆಲುವಿನ ಸಂಭ್ರಮದಲ್ಲಿ ಶಾಲಿನಿಗೆ ಮುತ್ತು ಕೊಟ್ಟ ವಿಡಿಯೋ ವೈರಲ್ ಆಗಿದೆ. ಭಾರತದ ಧ್ವಜ ಹಿಡಿದು ಬಹುಮಾನ ಸ್ವೀಕರಿಸಲು ಅಜಿತ್ ವೇದಿಕೆ ಹತ್ತಿದ್ದಾರೆ. ಅದಷ್ಟೇ ಅಲ್ಲ, ಅಜಿತ್ ಕಾರ್ ರೇಸ್ ಗೆದ್ದ ಸಂಭ್ರಮಕ್ಕೆ ಮಾಧವನ್ ಕೂಡ ಸಾಕ್ಷಿಯಾಗಿದ್ದಾರೆ. ಗೆಳೆಯನನ್ನು ತಬ್ಬಿ ಧನ್ಯವಾದ ತಿಳಿಸಿದ್ದಾರೆ.