ಬೆಂಗಳೂರು : ಯಲಂಹಕದಲ್ಲಿ ನಡೆಯುತ್ತಿರುವ ‘ಏರೋ ಇಂಡಿಯಾ 2025’ ಆಕರ್ಷಣೀಯವಾಗಿದ್ದು, ಇಂದು ಮತ್ತು ನಾಳೆ ಸಾರ್ವಜನಿಕರಿಗೆ ಏರ್ ಶೋ ವೀಕ್ಷಣೆಗೆ ಅವಕಾಶ ಸಿಕ್ಕಿದೆ.
ಇಂದು ಮತ್ತು ನಾಳೆ ಲಕ್ಷಾಂತರ ಜನ ಭಾಗಿಯಾಗುವ ಸಾಧ್ಯತೆಯಿದೆ. ಮೊದಲ ಮೂರು ದಿನ ಕೇವಲ ಅಡ್ವಾ ಪ್ರದೇಶಕ್ಕೆ ಮಾತ್ರ ಸಾರ್ವಜನಿಕರಿಗೆ ಅವಕಾಶ ನೀಡಲಾಗಿತ್ತು. ಇಂದಿನಿಂದ ಎರಡು ದಿನ ಸಂಪೂರ್ಣ ಏರೋ ಇಂಡಿಯಾ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಲಿದೆ.
ಒಂದು ಸಾವಿರ, ಎರಡೂವರೆ ಸಾವಿರಕ್ಕೆ ಟಿಕೆಟ್ ಪಡೆದವರು ಸಂಪೂರ್ಣ ಏರೋ ಇಂಡಿಯಾ ವೀಕ್ಷಣೆಗೆ ಅವಕಾಶ ಇರಲಿದೆ. ಇಂದು ಬೆಳಗ್ಗೆ 9:30 ರಿಂದ 12 ಗಂಟೆ ಮತ್ತು ಮಧ್ಯಾಹ್ನ 2:30 ರಿಂದ ಸಂಜೆ 5 ಗಂಟೆ ವರೆಗೆ ಏರ್ ಶೋ ಎರಡು ಪ್ರದರ್ಶನ ಇರಲಿದೆ.
ಸೂರ್ಯಕಿರಣ, ಆಮೆರಿಕದ ಎಫ್ 35, ರಷ್ಯಾದ ಎಸ್‌ಯು 57, ತೇಜಸ್ ಎಲ್ಸಿಎ, ಎಲ್ಯುಹೆಚ್ ಹೆಲಿಕಾಪ್ಟರ್ ಪ್ರದರ್ಶನ ಕಣ್ಮನ ಸೆಳೆಯಲಿದೆ. ಎರಡೂವರೆ ಸಾವಿರ, 5 ಸಾವಿರ ಟಿಕೆಟ್ ಪಡೆದವರಿಗೆ ಕಾರ್ಯಕ್ರಮ ಪ್ರದೇಶದ ಹೊರಭಾಗ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
1 ಸಾವಿರ ರೂ. ಟಿಕೆಟ್ ಪಡೆದವರಿಗೆ ಜಕ್ಕೂರು, ಜಿಕೆವಿಕೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಇರಲಿದೆ. ಈ ಭಾಗದಲ್ಲಿ ಸವಾರರಿಗೆ ಕಳೆದು ಮೂರು ದಿನಕ್ಕಿಂತಲೂ ಹೆಚ್ಚು ವಾಹನ ದಟ್ಟನೆ ಎಫೆಕ್ಟ್ ಇಂದು ಹಾಗೂ ನಾಳೆ ತಟ್ಟುವ ನೀರಿಕ್ಷೆಯಿದೆ ಎನ್ನಲಾಗಿದೆ.