ಬೆಂಗಳೂರು : ಸಿದ್ದರಾಮಯ್ಯ ತಮ್ಮ 16ನೆ ಬಜೆಟ್​​ನಲ್ಲಿ ಮಹಿಳೆಯರ ಸಬಲೀಕರಣಕ್ಕೆ ವಿವಿಧ ಯೋಜನೆಗಳನ್ನು ಘೋಷಿಸಿದ್ದಾರೆ. ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಗೆ 28,608 ಕೋಟಿ ರೂ ಹಣವನ್ನು 2025-26ರ ಸಾಲಿನ ವರ್ಷಕ್ಕೆ ಮೀಸಲಿರಿಸಲಾಗಿದೆ.

ಇದೇ ವೇಳೆ ಮಹಿಳಾ ಸಬಲೀಕರಣಕ್ಕೆ ಬಜೆಟ್​​ನಲ್ಲಿ ಇನ್ನೂ ಕೆಲ ಯೋಜನೆಗಳನ್ನು ಘೋಷಿಸಲಾಗಿದೆ. ಇದರಲ್ಲಿ ಅಕ್ಕ ಕೋ ಆಪರೇಟಿವ್ ಸೊಸೈಟಿ, ಅಕ್ಕ ಕ್ಯಾಂಟೀನ್​​ಗಳನ್ನು ಸ್ಥಾಪಿಸಲಾಗುವುದು ಎಂದು ಸಿದ್ದರಾಮಯ್ಯ ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.

ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಕಚೇರಿಗಳಲ್ಲಿ ಅಕ್ಕ ಕೆಫೆ ಕ್ಯಾಂಟೀನ್​ಗಳನ್ನು ತೆರೆಯಲಾಗುವುದು. ಹಾಗೆಯೆ, ರಾಜ್ಯವ್ಯಾಪಿ ಅಕ್ಕ ಕೋ ಆಪರೇಟಿವ್ ಸೊಸೈಟಿಗಳನ್ನು ಸ್ಥಾಪಿಸಲಾಗುವ ಯೋಜನೆಯನ್ನು ಘೋಷಿಸಲಾಗಿದೆ. ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳನ್ನು ಅಕ್ಕ ಸಹಕಾರಿ ಸಂಘಗಳ ಅಡಿ ತರಲು ಯೋಜಿಸಲಾಗಿದೆ. ರಾಜ್ಯದ ವಿವಿಧೆಡೆ 16 ಹೊಸ ಮಹಿಳಾ ಕಾಲೇಜುಗಳನ್ನು ಸ್ಥಾಪಿಸಲಾಗುವುದು ಎಂದು ಬಜೆಟ್​​ನಲ್ಲಿ ಘೋಷಿಲಾಗಿದೆ.

ರಾಜ್ಯ ಸರ್ಕಾರದ 2025-26ನೇ ಸಾಲಿನ ಬಜೆಟ್​ನ ಗಾತ್ರ 4 ಲಕ್ಷ ಕೋಟಿ ರೂಗಿಂತ ತುಸು ಹೆಚ್ಚಿನದ್ದಾಗಿದೆ. 2024-25ರ ಬಜೆಟ್ 3,71,383 ಕೋಟಿ ರೂ ಗಾತ್ರದ್ದಾಗಿತ್ತು. ಈ ಬಾರಿ ಅದು 4,09,549 ಕೋಟಿ ರೂನಷ್ಟಿದೆ. ಕಳೆದ ಬಾರಿಗಿಂತ ಈ ಬಾರಿಯ ಬಜೆಟ್ ಗಾತ್ರ 38,166 ಕೋಟಿ ರೂನಷ್ಟು ಹೆಚ್ಚಳವಾಗಿದೆ.

ಗೃಹಲಕ್ಷ್ಮೀ ಯೋಜನೆಗೆ 28,608 ಕೋಟಿ ರೂ ಮೀಸಲಿರಿಸಲಾಗಿದೆ. ಗೃಹಜ್ಯೋತಿ ಯೋಜನೆಗೆ 10,100 ಕೋಟಿ ರೂ ನೀಡಲಾಗುತ್ತಿದೆ. ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಇವೆರಡು ಯೋಜನೆಗಳು ಮುಖ್ಯವಾಗಿದ್ದು ಹೆಚ್ಚಿನ ಅನುದಾನ ಬೇಡುತ್ತವೆ. ಬಜೆಟ್​ನಲ್ಲಿ ಸಿದ್ದರಾಮಯ್ಯ ಈ ಯೋಜನೆಗಳಿಗೆ ಅನುದಾನ ನೀಡಲು ಯಶಸ್ವಿಯಾಗಿದ್ದಾರೆ.

Leave a Reply

Your email address will not be published. Required fields are marked *