ಸುದೀಪ್ ಅವರು ‘ಮ್ಯಾಕ್ಸ್’ ಸಿನಿಮಾ ಗೆದ್ದ ಸಂಭ್ರಮದಲ್ಲಿದ್ದಾರೆ. ಇದರ ನಡುವೆ ಸುದೀಪ್ ನಿವೃತ್ತಿ ಬಗ್ಗೆ ಮಾತಾಡಿದ್ದಾರೆ. ಎಲ್ಲಾ ಹೀರೋಗೂ ಒಂದು ಟೈಮ್ ಲೈನ್ ಅಂತ ಇರುತ್ತದೆ. ಕೊನೆಗೆ ಅವರು ಬೋರ್ ಆಗಿಬಿಡುತ್ತಾರೆ ಅಂತ ರಿಟೈರ್ಮೆಂಟ್ ಬಗ್ಗೆ ಸುದೀಪ ಮುಕ್ತವಾಗಿ ಮಾತನಾಡಿದ್ದಾರೆ.
ಸಂದರ್ಶನವೊಂದರಲ್ಲಿ ಸಿನಿಮಾ ಕೆರಿಯರ್ ಬಗ್ಗೆ ಮಾತನಾಡಿದ ಸುದೀಪ್, ಟೆನ್ಶನ್ ಅಂತ ಅಲ್ಲ, ಸುಸ್ತಾಗಬಹುದು. ಆದರೆ ನೀವು ಮಾಡೋದೆಲ್ಲಾ ಕರೆಕ್ಟ್ ಮಾಡಿದ್ರೆ ಎಲ್ಲಿ ಸುಸ್ತಾಗುತ್ತೆ? ನಮಗೆಲ್ಲರಿಗೂ ವಿಶ್ರಾಂತಿಬೇಕು. ಹೊಟ್ಟೆ ಇದೆ ಅಂತಾ ಸಿಕ್ಕಾಪಟ್ಟೆ ತಿನ್ನೋನಲ್ಲ. ನಿದ್ದೆ ಮಾಡೋಕೆ ಹಾಸಿಗೆ ಇದೆ ಅಂತ ಸುಮ್ನೆ ನಿದ್ದೆ ಮಾಡೋನಲ್ಲ. ರಿಟೈರ್ಮೆಂಟ್ ಆದ ಮೇಲೆ ರೆಸ್ಟ್ ಇದ್ದೇ ಇರುತ್ತೆ ಅಲ್ವಾ? ಅಲ್ಲಿಯವರೆಗೂ ಯಾಕೆ ರಿಟೈರ್ ಆಗಬೇಕು. ಕೆಲಸ ಮಾಡೋಣ ಎಂದಿದ್ದಾರೆ.
ಪ್ರತಿಯೊಬ್ಬ ಹೀರೋಗೂ ಒಂದು ಟೈಮ್ಲೈನ್ ಅಂತ ಇರುತ್ತದೆ. ಕೊನೆಗೆ ಬೋರ್ ಆಗಿಬಿಡ್ತಾರೆ. ನಮ್ಮಂತವರಿಗೆಲ್ಲಾ ಅಣ್ಣನ ರೋಲ್, ತಮ್ಮನ ರೋಲ್, ಚಿಕ್ಕಪ್ಪ ರೋಲ್ ಸೂಟ್ ಆಗಲ್ಲ. ಮಾಡೋದು ಇಲ್ಲ. ಆಗ ನಮಗೆ ಏನು ಅನಿಸುತ್ತೆ ಅಂದ್ರೆ, ಏನಾದರೂ ಹೊಸದು ಮಾಡಬೇಕು ಅನಿಸುತ್ತದೆ. ನಾನು ಹಿರೋ ಆಗಿ ಇನ್ನೊಬ್ಬರಿಗೆ ಕಾಯಿಸೋನಲ್ಲ, ಸೆಟ್ಗೆ ಬೇಗ ಹೋಗಿರುತ್ತೇನೆ. ಇನ್ನೂ ಹೀರೋ ಆಗಿ ಇಳಿದ ಮೇಲೆ ಬೇರೆ ಪಾತ್ರ ಮಾಡೋಕೆ ಹೋಗಿ ಇನ್ನೋಬ್ಬರಿಗೆ ಕಾಯುತ್ತಾ ಇರೋಕೆ ಆಗುತ್ತಾ? ಎಂದಿದ್ದಾರೆ.
ಮುಂದೆ ಸಿನಿಮಾ ಇನ್ನೂ ಮಾಡಬಹುದು, ನಿರ್ದೇಶನ ಅಥವಾ ನಿರ್ಮಾಣ ಮಾಡಬಹುದು ಗೊತ್ತಿಲ್ಲ. ಸಿನಿಮಾ ನಮಗೆ ಬಹಳ ಹತ್ತಿರವಾಗಿರುವುದರಿಂದ, ಅದರಿಂದ ದೂರ ಆಗ್ತೀನಿ ಅಂತ ಹೇಳೋಕೆ ಆಗಲ್ಲ. ಒಬ್ಬ ನಾಯಕ ನಟನೆಯಿಂದ ದೂರ ಆಗಬಹುದು. ಅದನ್ನ ಇವತ್ತು ಅಟ್ಯಾಚ್ಮೆಂಟ್ ಮಾಡಿಕೊಂಡು ಕೂರಿಲ್ಲ. ಪೋಷಕ ನಟನಾಗಿ ಸೈರಾ ನರಸಿಂಹ ರೆಡ್ಡಿ, ‘ದಬಾಂಗ್’ನಲ್ಲಿ ಬೇರೆ ತರಹದ ಪಾತ್ರ ಮಾಡುತ್ತಾ ಇರಲಿಲ್ಲ. ನಾನು ಯಾವತ್ತೂ ಹೀರೋ ಇವೇಜ್ಗೆ ಅಂಟಿಕೊಂಡಿಲ್ಲ. ಆ ಪಾತ್ರಗಳನ್ನು ಮಾಡೋಕೆ ಖುಷಿ ಇದೆ. ತೃಪ್ತಿ ಇದೆ ಎಂದು ಹೇಳಿದರು.