ವಾಷಿಂಗ್ಟನ್ : ಟ್ರಂಪ್ ಅಧಿಕಾರಕ್ಕೇರಿದ ಕೂಡಲೇ ಕ್ಯಾಪಿಟಲ್ ಭವನದ ಮೇಲೆ ದಾಳಿ ನಡೆಸಿದ್ದ 1,600 ಮಂದಿಗೆ ಕ್ಷಮಾದಾನ ನೀಡಿರುವುದು ಭಾರೀ ವಿವಾದವನ್ನು ಸೃಷ್ಟಿಸಿದೆ. ಮೂವರು ಫೆಡರಲ್ ನ್ಯಾಯಮೂರ್ತಿಗಳು ಬಹಿರಂಗವಾಗಿಯೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧಾರವನ್ನು ಖಂಡಿಸಿದ್ದಾರೆ.

ಒಂದು ಕಹಿ ಘಟನೆಯನ್ನು ಕ್ಷಮೆ ಬದಲಿಸಲಾಗದು.. ಅಧಿಕಾರ ಹಸ್ತಾಂತರ ಸಂದರ್ಭದಲ್ಲಿ ನಡೆದ ಉಲ್ಲಂಘನೆಗಳನ್ನು ಸರಿ ಮಾಡಲಾಗದು ಎಂದು ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ಟ್ರಂಪ್ ಮಾತ್ರ ತಮ್ಮ ನಡೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಕ್ಯಾಪಿಟಲ್ ಭವನದ ಮೇಲೆ ದಾಳಿ ನಡೆಸಿದ್ದವರನ್ನು ಟ್ರಂಪ್ ದೇಶಭಕ್ತರಿಗೆ ಹೋಲಿಕೆ ಮಾಡಿದ್ದಾರೆ.

ಈ ಮಧ್ಯೆ, ಅಕ್ರಮ ವಲಸಿಗರ ಬಹಿಷ್ಕರಣೆಗೆ ಸಂಬಂಧಿಸಿದ ಮಸೂದೆಗೆ ಅಮೆರಿಕಾ ಕಾಂಗ್ರೆಸ್ ಅನುಮೋದನೆ ನೀಡಿದ್ದು, ಈ ವಿಚಾರದಲ್ಲಿ ಟ್ರಂಪ್ ನಿಲುವನ್ನು ಅಮೆರಿಕಾ ಕಾಂಗ್ರೆಸ್ ಬೆಂಬಲಿಸಿದೆ. ಅಮೆರಿಕಾದಲ್ಲಿ ಯಾವುದೇ ಕ್ಷಣದಲ್ಲಿ ಗಡಿಪಾರು ಪ್ರಕ್ರಿಯೆ ಪ್ರಾರಂಭವಾಗುವ ಹಿನ್ನೆಲೆಯಲ್ಲಿ ಮೆಕ್ಸಿಕೋ ದೇಶ ತನ್ನ ಗಡಿಯಲ್ಲಿನ ಶರಣಾರ್ಥಿಗಳಿಗಾಗಿ ಶಿಬಿರವನ್ನು ತೆರೆಯುತ್ತಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *