ಕೊಲ್ಕತ್ತಾ : ಸ್ನಾತಕೋತ್ತರ ತರಬೇತಿ ವೈದ್ಯೆಯ ಮೇಲೆ ಅತ್ಯಾಚಾರ ನಡೆಸಿ ನಂತರ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಮರಣೋತ್ತರ ಪರೀಕ್ಷೆಯಲ್ಲಿ ಸ್ಪೋಟಕ ಮಾಹಿತಿಯೊಂದು ಬಹಿರಂಗವಾಗಿದೆ.
ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸ್ವಯಂಸೇವಕ ಮತ್ತು ಶಂಕಿತ ಅಪರಾಧದ ಜಾಗದಿಂದ ಹೊರಹೋಗುವ ದೃಶ್ಯ ಸಿಸಿಟಿವಿಯಲ್ಲಿ ಕಂಡುಬಂದ ಆರೋಪಿ ಸಂಜಯ್ ರಾಯ್ ಮೇಲೆ ಪಾಲಿಗ್ರಾಫ್ ಪರೀಕ್ಷೆ ನಡೆಸಲು ಕೇಂದ್ರ ತನಿಖಾ ದಳ (ಸಿಬಿಐ) ಪ್ರಯತ್ನಿಸುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ವರದಿಯಲ್ಲಿ ಇದು ಲೈಂಗಿಕ ದೌರ್ಜನ್ಯ ಎಂದೇ ಹೇಳುವ ಸಾಕಷ್ಟು ಪುರಾವೆಗಳು ಕಂಡುಬಂದಿವೆ.
ಬಾಹ್ಯ ಹಾಗೂ ಆಂತರಿಕ ಜನನಾಂಗಗಳಲ್ಲೂ ಹಲವಾರು ಗಾಯಗಳು ಕಂಡು ಬಂದಿದ್ದು, ಅಚ್ಚರಿಯ ಸಂಗತಿ ಎಂದರೆ ದೇಹದ ಅನೇಕ ಭಾಗಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಯೊಂದಿಗೆ ಶ್ವಾಸಕೋಶದಲ್ಲಿಯೂ ರಕ್ತಸ್ರಾವ ಕಂಡುಬಂದಿದೆ ಹಲವೆಡೆ ಒಟ್ಟು 14 ಗಾಯದ ಗುರುತುಗಳು ಕಂಡುಬಂದಿವೆ.
ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ, ಶ್ವಾಸಕೋಶದಲ್ಲಿ ರಕ್ತಸ್ರಾವ ಮತ್ತು ದೇಹದಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಮುರಿತದ ಯಾವುದೇ ಲಕ್ಷಣಗಳಿಲ್ಲ.
ಎಂದು ಮರಣೋತ್ತರ ಪರೀಕ್ಷೆಯ ವರದಿಯಾಗಿದೆ.ಅತ್ಯಚಾರಕ್ಕೆ ಒಳಗಾದ ಸಂತ್ರಸ್ತೆಯ ಖಾಸಗಿ ಅಂಗದ ಒಳಗೆ 150 ಮಿಲಿ ಗ್ರಾಂ ವೀರ್ಯ ಪತ್ತೆಯಾಗಿದೆ. ಒಳಾಂಗಗಳು, ರಕ್ತದ ಮಾದರಿ ಹಾಗೂ ದೇಹದಲ್ಲಿ ಪತ್ತೆಯಾದ ದ್ರವ ರೂಪದ ವಸ್ತು ಮುಂತಾದವುಗಳನ್ನು ಹೆಚ್ಚುವರಿ ಪರಿಶೀಲನೆಗೆ ಲ್ಯಾಬೋರೇಟರಿಗೆ ಕಳುಹಿಸಿಕೊಡಲಾಗಿದೆ.
ಸ್ನಾತಕೋತ್ತರ ತರಬೇತಿ ವೈದ್ಯೆ ಆಗಸ್ಟ್ 9 ರಂದು ಆಸ್ಪತ್ರೆಯ ಸೆಮಿನಾರ್ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ಕೋಲ್ಕತಾ ಪೊಲೀಸರ ನಾಗರಿಕ ಸ್ವಯಂಸೇವಕ ಸಂಜಯ್ ರಾಯ್ ಅವರನ್ನು ಘಟನೆಯ ಮರುದಿನ ಬಂಧಿಸಲಾಗಿದೆ. ನಂತರ ಕಲ್ಕತ್ತಾ ಹೈಕೋರ್ಟ್ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿತು. ಘಟನೆಯಧಾರಿತ ತನಿಖಎ ಅತಿ ಹೆಚ್ಚು ಚುರುಕಾಗುತ್ತಿದೆ.