ಲಕ್ನೋ : ಪ್ರಯಾಗರಾಜ್‌ದಲ್ಲಿ ನಡೆಯಲಿರುವ ಮಹಾಕುಂಭಮೇಳದ ಸಮಯದಲ್ಲಿ ಮುಸ್ಲಿಮರ ಸಾಮೂಹಿಕ ನಡೆಯುತ್ತದೆ ಎಂದು ಹಿರಿಯ ಮೌಲ್ವಿಯೊಬ್ಬರು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆಯುವ ಮೂಲಕ ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಯಾಗರಾಜ್‌ದಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಮಹಾಕುಂಭಮೇಳ ನಡೆಯುತ್ತದೆ. ಈ ವರ್ಷ ಜನವರಿ 13ರಿಂದ ಫೆಬ್ರವರಿ 26ರವರೆಗೆ ಕುಂಭಮೇಳ ಆಯೋಜಿಸಲಾಗಿದ್ದು, ಈ ಕುಂಭಮೇಳದಲ್ಲಿ ಸಾಮೂಹಿಕ ಮತಾಂತರದ ಆತಂಕವನ್ನು ಮೌಲ್ವಿಯವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ಹೇಳಲಾಗಿದೆ.

ಅಖಿಲ ಭಾರತ ಮುಸ್ಲಿಂ ಜಮಾತ್ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ಜಿ ಬರೇಲ್ವಿ ಅವರು ಪತ್ರ ಸಿಎಂ ಯೋಗಿಗೆ ಬರೆದಿದ್ದಾರೆ. ಈ ಮುಂಚೆ ಮಹಾಕುಂಭದಲ್ಲಿ ಭಾಗಿಯಾಗದಂತೆ ಮುಸ್ಲಿಮರಿಗೆ ಸಲಹೆ ನೀಡಿದ್ದರು. ಇದೀಗ ಈಗ ಕುಂಭಮೇಳದ ಸಂದರ್ಭದಲ್ಲಿ ನೂರಾರು ಮುಸ್ಲಿಮರನ್ನು ಮತಾಂತರ ಮಾಡುವ ಯೋಜನೆಗಳನ್ನು ವಿಫಲಗೊಳಿಸಬೇಕು. ಜವಾಬ್ದಾರಿಯುತ ನಾಗರಿಕನಾಗಿ ಸಿಎಂಗೆ ತಿಳಿಸಿದ್ದೇನೆ. ಈ ಮತಾಂತರದ ಬಗ್ಗೆ ನಂಬಲರ್ಹ ಮೂಲಗಳಿಂದ ತಮಗೆ ಮಾಹಿತಿ ಸಿಕ್ಕಿದೆ. ಈಗ ಅದನ್ನು ನಿಲ್ಲಿಸುವ ಹೊಣೆ ರಾಜ್ಯ ಸರ್ಕಾರದ್ದು ಎಂದು ಹೇಳಿದ್ದಾರೆ.

ಈ ಕುರಿತು ಜಮಿಯತ್ ಉಲಮಾ-ಎ-ಹಿಂದ್‌ನ ಉತ್ತರ ಪ್ರದೇಶ ಘಟಕದ ಕಾನೂನು ಸಲಹೆಗಾರ ಮೌಲಾನಾ ಕಾಬ್ ರಶೀದಿ ಮಾತನಾಡಿ, ಹಿಂದೂಗಳ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮಕ್ಕೂ ಮೊದಲು ಮುಸ್ಲಿಮರು ಚರ್ಚೆಯ ಕೇಂದ್ರವಾಗಿರುವುದು ಇದೇ ಮೊದಲು ಎಂದರು.

Leave a Reply

Your email address will not be published. Required fields are marked *