ಧಾರವಾಡ : ಜೆ ಎಸ್ ಡಬ್ಲ್ಯೂ ಜಿಂದಾಲ್ ಕಂಪನಿಗೆ ರಾಜ್ಯ ಸರ್ಕಾರ ಭೂಮಿ ಪರಭಾರೆ ಮಾಡುತ್ತಿರುವುದಕ್ಕೆ ವಿಧಾನ ಸಭೆಯ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ವಿರೋಧ ವ್ಯಕ್ತಪಡಿಸಿದ್ದಾರೆ. ಧಾರವಾಡ ನಗರದಲ್ಲಿ ಮಾದ್ಯಮದವರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ವಿರೋಧದ ಮಧ್ಯೆ 3,666 ಎಕರೆ ಜಮೀನನ್ನು ಪರಭಾರೆ ಮಾಡಲು ಮುಂದಾಗಿದ್ದು ರಾಜ್ಯದ ಜನರ ಆಸ್ತಿಯನ್ನು ಕಡಿಮೆ ಬೆಲೆಗೆ ನೀಡುವುದು ಸರಿಯಲ್ಲ, ಈ ಕುರಿತು ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಆರೋಪಿಸಿದರು.
ಸಂಡೂರು ಭಾಗದಲ್ಲಿನ ಭೂಮಿ ಬಂಗಾರ ಇದ್ದಂಗೆ, 2000 ಎಕರೆಗೆ 1 ಲಕ್ಷ 20 ಸಾವಿರ ಮಾತ್ರ ಪರಿಹಾರ ಕೊಡಲಾಗುತ್ತಿದೆ. 1600 ಎಕೆರೆಗೆ 1 ಲಕ್ಷ 50 ಸಾವಿರ ಪರಿಹಾರವನ್ನು ಕೊಡ್ತಾ ಇದಾರೆ. ಈ ಕುರಿತು ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆಯಲಾಗಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಿಂದಿನ ಅವಧಿಯಲ್ಲಿ 2013 ರಲ್ಲಿ ನಾವು ಹೋರಾಟ ಮಾಡಿ ವಿರೋಧ ವ್ಯಕ್ತಪಡಿಸಿದ್ದು, ಮೈತ್ರಿ ಸರಕಾರದಲ್ಲಿ ಸಚಿವ ಎಚ್ ಕೆ ಪಾಟೀಲ ಎಲ್ಲರೂ ಸೇರಿ ಹೋರಾಟ ಮಾಡಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಶನ್ ಅನುಮತಿ ಕುರಿತು ಅಗಸ್ಟ್ 29 ರಂದು ವಿಚಾರಣೆ ನಡೆಯಲಿದೆ. ಅವರು ಸಿಎಂ ಆಗಿ ಇರ್ತಾರೆ ಇಲ್ವೋ ಗೊತ್ತಿಲ್ಲ, ಇಂತಹ ಸಂಧರ್ಭದಲ್ಲಿ ಇನ್ನೊಂದು ದೊಡ್ಡ ಹಗರಣಕ್ಕೆ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರಕಾರ ಕೈ ಹಾಕಿದೆ ಎಂದು ಆರೋಪಿಸಿದರು. 2013 ರಲ್ಲಿ ಕೈ ಸರಕಾರವೆ ಡಿಸಿಜನ್ ತೆಗೆದುಕ್ಕೊಂಡಿದ್ದರು ಆ ಸಂಧರ್ಭದಲ್ಲಿ ನಾವು ವಿರೋಧ ಮಾಡಿದ್ದೆವೆ. ನಾವು ರೈತರು ಹಾಗೂ ಜನರ ಜೊತೆಗೆ ಹಾಗೂ ಕಾನೂನಾತ್ಮ ಹೋರಾಟ ಮಾಡುತ್ತೆವೆ ಎಂದು ಎಚ್ಚರಿಕೆ ನೀಡಿದರು.
ಜಿಂದಾಲ್ ಕಂಪನಿಗೆ ಭೂಮಿ ಪರಭಾರೆ ವಿಚಾರದಲ್ಲಿ ಈ ಹಿಂದೆ ಯಾರೋ ಒಬ್ಬರು ಪಿಐಎಲ್ ಹೋಗಿದ್ರು, ಆ ಸಂಧರ್ಬದಲ್ಲಿ ಸರಕಾರ ಮುಚ್ಚಳಿಕೆ ಬರೆದುಕೊಟ್ಟಿದೆ ಹೈಕೋರ್ಟ ದೂರುದಾರರಿಗೆ ಆರ್ಡರ್ ಮಾಡಿದೆ. ಸರಕಾರ ತೆಗೆದುಕ್ಕೊಂಡ ನಿರ್ಣಯಕ್ಕೆ ಅದರ ಬಗ್ಗೆ ಸಮಾಧಾನ ಇಲ್ಲದೆ ಹೋದರೆ ಮತ್ತೆ ಕೋರ್ಟಗೆ ಬರಬಹುದು, ರಾಜ್ಯದ ಸಂಪತ್ತನ್ನ ನಾವು ನಾಶ ಮಾಡಲಿಕ್ಕೆ ಬಿಡಲ್ಲ ಎಂದು ವಾಗ್ದಾಳಿ ನಡೆಸಿದರು.