ನವದೆಹಲಿ : ಆಮ್ ಆದ್ಮಿ ಪಕ್ಷದ ವರಿಷ್ಠ, ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ಗೆ ವಿಧಾನಸಭೆ ಚುನಾವಣೆಯಲ್ಲಿ ಸೋಲಾಗಿದೆ.
ಇದರೊಂದಿಗೆ ಆಡಳಿತಾರೂಢ ಎಎಪಿಗೆ ಹಾಗೂ ಕೇಜ್ರಿವಾಲ್ಗೆ ಭಾರೀ ಮುಖಭಂಗವಾದಂತಾಗಿದೆ. ಸತತ ಎರಡು ಬಾರಿ ದೆಹಲಿಯ ಗದ್ದುಗೆ ಏರಿದ್ದ ಎಎಪಿ ಮತ್ತು ಕೇಜ್ರಿವಾಲ್ಗೆ ಈ ಬಾರಿ ಅಬಕಾರಿ ನೀತಿ ಹಗರಣದಿಂದ ಭಾರಿ ಹಿನ್ನಡೆಯಾಗಿತ್ತು. ಅದು ಮತದಾನದ ಮೇಲೂ ಪರಿಣಾಮ ಬೀರಿದಂತಿದೆ.