ಹುಬ್ಬಳ್ಳಿ: ಸಿಎಂ ಬದಲಾವಣೆ ಮಾಡಲು ಕಾಂಗ್ರೆಸ್ ನಾಯಕರು ಸಿದ್ಧರಾಗಿದ್ದು, ಬಹುತೇಕರು ಸಿದ್ಧರಾಮಯ್ಯನವರ ಜೊತೆಗೆ ಇದ್ದೇವೆ ಅಂತಾರೇ ಅದೆಲ್ಲವೂ ನಾಟಕೀಯ. ಎಂಟು ಹತ್ತು ಜನರಲ್ಲಿ ನಾನು ಏಕೆ ಮುಖ್ಯಮಂತ್ರಿ ಆಗಬಾರದು ಎಂಬುವಂತ ಆಸೆಯಿದೆ ಈ ನಿಟ್ಟಿನಲ್ಲಿ ಸಿಎಂ ಬದಲಾವಣೆ ವಿಚಾರ ಸಾಕಷ್ಟು ಜೋರಾಗಿದೆ ಎಂದು ಮಾಜಿ ಸಿಎಂ ಹಾಗೂ ಸಂಸದ ಜಗದೀಶ ಶೆಟ್ಟರ್ ಹೇಳಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದೇ ತಡ ಕಾಂಗ್ರೆಸ್ ನಾಯಕರು ಅಡಿಪಾಯ ಹಾಕಲು ತೆರೆ ಮರೆಯಲ್ಲಿ ಪ್ರಯತ್ನ ನಡೆಸಿ ಸಿಎಂ ಬದಲಾವಣೆ ಮಾಡಲು ತಯಾರಿ ನಡೆಸಿದ್ದಾರೆ. ಎಲ್ಲರೂ ನಾಟಕೀಯವಾಗಿ ನಟಿಸುತ್ತಿದ್ದಾರೆ ವಿನಃ ಸಿಎಂ ಬದಲಾವಣೆ ಮಾಡುವುದೇ ಅವರ ಬಹುದೊಡ್ಡ ನಿರ್ಧಾರ ಎಂದು ಅವರು ಹೇಳಿದರು.
ಸಿದ್ಧರಾಮಯ್ಯನವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ದಿನದಿಂದಲೇ ಇಂತಹ ಬೆಳವಣಿಗೆ ನಡೆದಿದೆ. ಸಿಎಂ ಬದಲಾವಣೆ ಇಂದು ನಿನ್ನೆಯದಲ್ಲ. ಬಹುದಿನಗಳ ಕಾರ್ಯತಂತ್ರವಾಗಿದೆ. ಅಲ್ಲದೇ ಕಾಂಗ್ರೆಸ್ ನಲ್ಲಿ ಹಲವಾರು ಬಣಗಳಾಗಿವೆ. ಶಾಸಕರು ಗುಂಪು ಕಟ್ಟಿಕೊಂಡು ಸಭೆ ಮಾಡುತ್ತಿವೆ ಇದರ ಅರ್ಥ ಸಿಎಂ ಬದಲಾವಣೆ ಮಾಡಿ ಅಧಿಕಾರ ಅನುಭವಿಸುವ ವಿದ್ಯಮಾನಗಳು ನಡೆಯುತ್ತಿವೆ ಎಂದು ಅವರು ಹೇಳಿದರು.