ಬೆಂಗಳೂರಿನ ಟಿ.ದಾಸರಹಳ್ಳಿಯಲ್ಲಿ ಗಂಡ ಹೆಂಡತಿ ಸೇರಿ ಚೀಟಿ ಹೆಸರಲ್ಲಿ ಕೋಟ್ಯಾಂತರ ರೂಪಾಯಿ ವಂಚಿಸಿದ್ದು, ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು: ಚೀಟಿ ಕಟ್ಟಿಸಿಕೊಂಡು ವಂಚಿಸಿದ ಘಟನೆ ಬೆಂಗಳೂರಿ(Bengaluru)ನ ಟಿ.ದಾಸರಹಳ್ಳಿಯಲ್ಲಿ ನಡೆದಿದೆ. ಪುಣ್ಯ ಹಾಗೂ ಚಂದ್ರಶೇಖರ್ ಎಂಬ ದಂಪತಿಗಳು ಸ್ವಂತ ಮನೆ ತೋರಿಸಿ, ಸುಮಾರು 1.5 ಕೋಟಿಗೂ ಹೆಚ್ಚು ಹಣ ಚೀಟಿ ಹಾಕಿಸಿಕೊಂಡು ಹಲವರಿಗೆ ವಂಚಿಸಿದ್ದು, ಈ ಕುರಿತು ದಂಪತಿ ವಿರುದ್ದ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ 6ಗಂಟೆಗಳ ಬಳಿಕ ಸತತ ಪ್ರಯತ್ನದೊಂದಿಗೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಡೇಟ್ ಎಕ್ಸಪೈರ್ ಆಗಿದ್ದ ಪದಾರ್ಥಗಳನ್ನು ಶೇಕರಿಸಿಟ್ಟಿದ್ದ ಗೋದಾಮು ಪತ್ತೆ
ಬೆಂಗಳೂರು: ಡೇಟ್ ಎಕ್ಸಪೈರ್ ಆಗಿದ್ದ ಪದಾರ್ಥಗಳ ಮಾರಾಟ ಮಾಡುತ್ತಿದ್ದ ಹಾಗೂ ದಾಸ್ತಾನು ಮಾಡಿದ್ದ ಗೋದಾಮು ಬೆಂಗಳೂರಿನ ಕಾಟನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ. ಹರಿಹಂತ್ ಟ್ರೇಡಿಂಗ್ ಕಂಪನಿಯ ಹೆಸರಲ್ಲಿ ಶೇಖರಣೆ ಮಾಡಲಾಗಿದ್ದು, ಚಂದ್ರಪ್ರಕಾಶ್ ಎಂಬುವವರ ಹೆಸರಿನಲ್ಲಿ ಕಂಪನಿಯಿದೆ. ಇಲ್ಲಿ ಪ್ರತಿಷ್ಠಿತ ಕಂಪನಿಗಳ ಬಿಸ್ಕತ್ತು, ಚಾಕಲೇಟ್, ಚಾಕಲೇಟ್ ಪೌಡರ್, ಅಡುಗೆ ಎಣ್ಣೆ, ಡಾಲ್ಡಾ, ತುಪ್ಪ , ರವೆ, ಸೇರಿ ಹಲವಾರು ವಸ್ತುಗಳನ್ನು ಬಳಕೆ ಮಾಡಲು ಯೋಗ್ಯವಲ್ಲದ ಸ್ಥಿತಿಯಲ್ಲಿ ದಾಸ್ತಾನು ಮಾಡಿಡಲಾಗಿದೆ.
ಅಂಗಡಿಯೊಂದರಲ್ಲಿ ಸಿಕ್ಕ ಬಿಸ್ಕೆಟ್ ಮೂಲ ಹುಡುಕಿದ ಸಿಸಿಬಿ, ಫೂಡ್ ಸೇಫ್ಟಿ ಡಿಪಾರ್ಟ್ಮೆಂಟ್
ಇನ್ನು ಅಂಗಡಿಯೊಂದರಲ್ಲಿ ಸಿಕ್ಕ ಬಿಸ್ಕೆಟ್ಯಿಂದ ಅವಧಿ ಮುಗಿದ ವಸ್ತುಗಳನ್ನು ಮತ್ತೆ ಸ್ಟೋರ್ ಮಾಡಿ ಬಳಿಕ ಮತ್ತೆ ರೀ ಪ್ರೊಡಕ್ಷನ್ ಮಾಡುತ್ತಿರುವ ಬಗ್ಗೆ ಅನುಮಾನ ಬಂದ ಹಿನ್ನಲೆ ಅದರ ಮೂಲವನ್ನ ಸಿಸಿಬಿ ಮತ್ತು ಫುಡ್ ಸೇಫ್ಟಿ ಡಿಪಾರ್ಟ್ಮೆಂಟ್ ಅಧಿಕಾರಿಗಳು ಹುಡುಕಿಕೊಂಡು ಬಂದಿದ್ದರು. ಈ ವೇಳೆ ಗೋದಾಮಿನೊಳಗೆ ಪರಿಶೀಲನೆ ನಡೆಸಿದ್ದಾರೆ. ಅಲ್ಲಿರುವ ಡೇಟ್ ಎಕ್ಸಪೈರ್ ಫುಡ್ ಬಗ್ಗೆ ವಿಚಾರಿಸಿದಾಗ ‘ಇದೆಲ್ಲಾ ಪ್ರಾಣಿಗಳ ಆಹಾರ ತಯಾರಿಕೆಗೆ ಬಳಸುತ್ತೆವೆ ಎಂದು ಗೋದಾಮು ಮಾಲಿಕ ಮಾಹಿತಿ ನೀಡಿದ್ದಾರೆ. ಸದ್ಯ ಎಲ್ಲ ಸ್ಯಾಂಪಲ್ಗಳನ್ನು ಪಡೆದು ಎಫ್ಎಸ್ ಎಲ್ಗೆ ಫುಡ್ ಸೇಫ್ಟಿ ಅಧಿಕಾರಿಗಳು ಕಳಿಸಿದ್ದು, ಲ್ಯಾಬ್ ವರದಿ ಬಂದ ಬಳಿಕ ಅಸಲಿಯತ್ತು ಬಯಲಾಗಲಿದೆ.