ನವದೆಹಲಿ : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ‘ಭಾರತ್ ಪೋರ್ಟಲ್’ ಉದ್ಘಾಟನೆ ಮಾಡಿದ್ದಾರೆ. ಭಾರತೀಯ ತನಿಖಾ ಸಂಸ್ಥೆಗಳು, ಪರಾರಿಯಾದವರನ್ನು ಬಂಧಿಸಲು ಆಧುನಿಕ ತಂತ್ರಜ್ಞಾನ ಮತ್ತು ತಂತ್ರಗಳನ್ನು ಬಳಸುವ ಸಮಯ ಬಂದಿದೆ ಎಂದು ತಿಳಿಸಿದ್ದಾರೆ.
ಇಲ್ಲಿನ ಭಾರತ್ ಮಂಟಪದಲ್ಲಿ ‘ಭಾರತ್ ಪೋಲ್’ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸಚಿವರು, ಕೇಂದ್ರೀಯ ತನಿಖಾ ದಳ ಅಭಿವೃದ್ಧಿಪಡಿಸಿದ ಪೋರ್ಟಲ್‌ನ ನೈಜ-ಸಮಯದ ಇಂಟರ್ಫೇಸ್ ಪ್ರಮುಖ ಲಕ್ಷಣವಾಗಿದೆ ಎಂದು ಒತ್ತಿ ಹೇಳಿದರು. ಇದು ಕೇಂದ್ರ ಮತ್ತು ರಾಜ್ಯ ಏಜೆನ್ಸಿಗಳಿಗೆ ಇಂಟರ್‌ಪೋಲ್‌ನೊಂದಿಗೆ ಸುಲಭವಾಗಿ ಸಂಪರ್ಕ ಸಾಧಿಸಲು ಮತ್ತು ಅವರ ತನಿಖೆಯನ್ನು ವೇಗಗೊಳಿಸಲು ಅನುವು ಮಾಡಿಕೊಡುತ್ತದೆ ಎಂದಿದ್ದಾರೆ.
ಅಪರಾಧ ಎಸಗಿ ಭಾರತದಿಂದ ಪರಾರಿಯಾಗಿರುವ ಆರೋಪಿಗಳನ್ನು ಬಂಧಿಸಲು ಮತ್ತು ನ್ಯಾಯಾಂಗಕ್ಕೆ ಕರೆತರಲು ನಾವು ಆಧುನಿಕ ತಂತ್ರಜ್ಞಾನ ಮತ್ತು ತಂತ್ರಗಳನ್ನು ಬಳಸುವ ಸಮಯ ಇದು ಎಂದು ಹೇಳಿದ್ದಾರೆ. ನಾವು ಜಾಗತಿಕ ಸವಾಲುಗಳ ಮೇಲೆ ಕಣ್ಣಿಡಬೇಕು ಮತ್ತು ನಮ್ಮ ಆಂತರಿಕ ವ್ಯವಸ್ಥೆಯನ್ನು ನವೀಕರಿಸಬೇಕು. ಹೊಸ ಪೋರ್ಟಲ್ ಕೇಂದ್ರ ಮತ್ತು ರಾಜ್ಯ ತನಿಖಾ ಸಂಸ್ಥೆಗಳಿಗೆ ಇಂಟರ್‌ಪೋಲ್‌ನ 195 ಸದಸ್ಯ ರಾಷ್ಟ್ರಗಳಿಂದ ತಮ್ಮ ಪ್ರಕರಣಗಳ ಮಾಹಿತಿಯನ್ನು ಹಂಚಿಕೊಳ್ಳಲು ಮತ್ತು ಪಡೆಯಲು ಅನುಮತಿಸುತ್ತದೆ ಎಂದು ಮಾಹಿತಿ ನೀಡಿದರು.