ಬೆಂಗಳೂರು : ಮದ್ಯಪ್ರಿಯರಿಗೆ ಬಿಗ್ ಶಾಕ್‌, ಬಜೆಟ್‌ಗೆ ಮೊದಲೇ ಮದ್ಯದ ದರ ಏರಿಕೆಯಾಗುವ ಸಾಧ್ಯತೆಯಿದೆ. ಸಾಧಾರಣವಾಗಿ ಬಜೆಟ್‌ನಲ್ಲಿ ಮದ್ಯದ ಮೇಲೆ ಅಬಕಾರಿ ತೆರಿಗೆ ಹಾಕಲಾಗುತ್ತದೆ. ಆದರೆ ಈ ಬಾರಿ ಬಜೆಟ್‌ ಮಂಡನೆಯಾಗುವ ಮೊದಲೇ ದರ ಏರಲಿದೆ ಎಂಬ ಮಾಹಿತ ತಿಳಿದು ಬಂದಿದೆ.

ಬಸ್‌‍ ಪ್ರಯಾಣ ದರ ಏರಿಕೆ ನಡುವೆಯೇ, ಸದ್ದಿಲ್ಲದೆ ಬಿಯರ್‌ ದರ ಏರಿಕೆ ಮಾಡಲಾಗಿದೆ. ಆರ್ಥಿಕ ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ಅಬಕಾರಿಯಿಂದ ನಿರೀಕ್ಷಿತ ಆದಾಯ ಬಾರದ ಹಿನ್ನೆಲೆಯಲ್ಲಿ ಸರ್ಕಾರ ಬಜೆಟ್‌ಗೆ ಮುನ್ನವೇ ಅಬಕಾರಿ ಉದ್ಯಮವೇ ಸಂಕಷ್ಟ ಎದುರಾಗಿದೆ. ಸರ್ಕಾರ ದರ ಏರಿಕೆ ಮೂಲಕ ಬಿಯರ್‌ ಪ್ರಿಯರ ಶಾಕ್‌ ನೀಡಿದೆ, ಪ್ರತಿ ಬಿಯರ್‌ ಬಾಟಲಿಗೆ ಕನಿಷ್ಠ 10 ರಿಂದ 50 ರೂ.ಗಳವರೆಗೆ ಅದರಲ್ಲಿನ ಅಲ್ಕೋಹಾಲ್‌ಅಂಶದ ಮೇಲೆ ದರ ಹೆಚ್ಚಾಗಲಿದೆ.

ಜನವರಿ 20 ರಿಂದಲೇ ಕೆಲ ಬಿಯರ್ ದರ ಏರಿಕೆಯಾಗುವ ಸಾಧ್ಯತೆಯಿದೆ. ದರ ಏರಿಕೆ ಬಗ್ಗೆ ಅಬಕಾರಿ ಇಲಾಖೆಯ ಮೂಲಗಳು ಮಾಹಿತಿ ಹೊರಬಂದಿವೆ. ಶೀಘ್ರವೇ ದರ ಏರಿಕೆಯ ಬಗ್ಗೆ ಅಬಾಕರಿ ಇಲಾಖೆ ಅಧಿಕೃತ ಪ್ರಕಟಣೆ ಹೊರಡಿಸುವ ಸಾಧ್ಯತೆಯಿದೆ. ಕನಿಷ್ಠ 10 ರಿಂದ 45 ರೂ. ದರ ಏರಿಕೆಯಾಗಲಿದೆ. ದುಬಾರಿ ಬೆಲೆಯ ಬಿಯರ್‌ ದರ ಏರಿಕೆಯಾಗುವುದಿಲ್ಲ. ಬದಲಾಗಿ 300 ರೂ. ಒಳಗಡೆ ಇರುವ ಮದ್ಯದ ಏರಿಸಲು ಅಬಕಾರಿ ಇಲಾಖೆ ಸಿದ್ಧತೆ ನಡೆಸುತ್ತಿದೆ ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *