ಜೆರುಸಲೇಮ್ : ಬ್ಯಾಟ್​ ಯಾಮ್ ನಗರದಲ್ಲಿ ಮೂರು ಬಸ್​ಗಳ ಮೇಲೆ ಬಾಂಬ್ ದಾಳಿಗಳು ನಡೆದಿವೆ ಎಂದು ಇಸ್ರೇಲಿ ಪೊಲೀಸರು ತಿಳಿಸಿದ್ದಾರೆ. ಅದೃಷ್ಟವಶಾತ್ ಯಾರಿಗೂ ಯಾವುದೇ ರೀತಿಯ ಗಾಯಗಳಾಗಿಲ್ಲ. ಇದು ಭಯೋತ್ಪಾದಕ ದಾಳಿ ಎಂದು ಪೊಲೀಸರು ಹೇಳಿದ್ದಾರೆ. ಬಾಂಬ್​ಗಳು ಸ್ಫೋಟಗೊಂಡಾಗ ಬಸ್​ಗಳು ಖಾಲಿ ಇದ್ದವು ಎಂದು ವರದಿಯಾಗಿದೆ.

ಈ ಮೂರು ಬಸ್​ಗಳು ಸುಮಾರು 500 ಮೀಟರ್​ ದೂರದಲ್ಲಿ ಪಾರ್ಕಿಂಗ್ ಸ್ಥಳದಲ್ಲಿದ್ದವು. ಬ್ಯಾಟ್ ಯಾಮ್ ಇಸ್ರೇಲ್‌ನ ದಕ್ಷಿಣ ಕರಾವಳಿಯಲ್ಲಿದೆ ಮತ್ತು ಟೆಲ್ ಅವೀವ್‌ನ ದಕ್ಷಿಣದಲ್ಲಿದೆ. ಮತ್ತೊಂದು ಬಸ್​ನಲ್ಲಿ ಸಜೀವ ಬಾಂಬ್ ಪತ್ತೆಯಾಗಿದೆ. ಬಾಂಬ್ ನಿಷ್ಕ್ರಿಯ ದಳ ಸ್ಥಳದಲ್ಲಿದೆ. ಅನುಮಾನಾಸ್ಪದ ವಸ್ತುಗಳಿಗಾಗಿ ಹಾಗೂ ಶಂಕಿತರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *