ಮಾಸ್ಕೋ : ದೇಶದಲ್ಲಿ ಜನನ ಪ್ರಮಾಣ ಹೆಚ್ಚಿಸಲು ಚೀನಾ, ಜಪಾನ್‌ ಮಾದರಿಯಲ್ಲೇ ರಷ್ಯಾ ಸಹ ಹೊಸ ಹೊಸ ಮಾರ್ಗಗಳನ್ನು ಹುಡುಕುತ್ತಿದೆ. ಈಗಾಗಲೇ ‌ಜನಸಂಖ್ಯಾ ಹೆಚ್ಚಳಕ್ಕೆ ʻಸೆಕ್ಸ್‌ ಸಚಿವಾಲಯʼ ಸ್ಥಾಪಿಸಲು ಮುಂದಾಗಿರುವ ಪುಟಿನ್‌ ನೇತೃತ್ವದ ಸರ್ಕಾರ, ಈಗ ಹೊಸದೊಂದು ಬಂಪರ್‌ ಆಫರ್‌ ಘೋಷಣೆ ಮಾಡಿದೆ.

ಆರೋಗ್ಯಕರ ಮಗುವಿಗೆ ಜನ್ಮ ನೀಡುವ 25 ವರ್ಷದೊಳಗಿನ ಯುವತಿರಿಗೆ 1 ಲಕ್ಷ ರುಬೆಲ್ಸ್‌ ಅಂದರೆ ಸುಮಾರು 81,000 ರೂ. ಪ್ರೋತ್ಸಾಹ ಧನ ನೀಡುವ ಯೋಜನೆಯನ್ನು ಪರಿಚಯಿಸಿದೆ. ಸದ್ಯಕ್ಕೆ ಇಡೀ ದೇಶಾದ್ಯಂತ ಈ ಯೋಜನೆಯನ್ನು ಜಾರಿಗೊಳಿಸಲಾಗಿಲ್ಲ, ಆದರೆ ರಷ್ಯಾದ ಕರೇಲಿಯಾ ಎಂಬ ಪ್ರದೇಶದಲ್ಲಿ ಮಾತ್ರ ಜಾರಿಗೆ ತರಲಾಗಿದೆ ಎಂದು ವರದಿ ಮಾಡಲಾಗಿದೆ.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವವರು ಸ್ಥಳೀಯ ವಿಶ್ವವಿದ್ಯಾಲಯ ಅಥವಾ ಖಾಸಗಿ ಕಾಲೇಜುಗಳಲ್ಲಿ ಪೂರ್ಣ ಸಮಯದ ವಿದ್ಯಾರ್ಥಿಗಳಾಗಿರಬೇಕು. 25 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು ಹಾಗೂ ಕರೇಲಿಯಾ ಪ್ರದೇಶದ ನಿವಾಸಿಗಳೇ ಆಗಿರಬೇಕು ಎಂಬ ಷರತ್ತುಗಳನ್ನು ವಿಧಿಸಲಾಗಿದೆ.

Leave a Reply

Your email address will not be published. Required fields are marked *