ನಾಳೆ (ಆಗಸ್ಟ್ 21, 2024) ಬುಧವಾರದಂದು ಭಾರತ್ ಬಂದ್‌ಗೆ ಕರೆ ನೀಡಲಾಗಿದ್ದು. ಭಾರತ್ ಬಂದ್‌ನ ಈ ಘೋಷಣೆಯು ಸುಪ್ರೀಂ ಕೋರ್ಟ್‌ನ ತೀರ್ಪಿನ ಆಧಾರದ ವಿರುದ್ಧ ಪ್ರತಿಭಟನೆಯ ಸಂಕೇತವಾಗಿದೆ. ರಾಜಸ್ಥಾನದಲ್ಲಿನ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ (SC/ST) ಈಗಾಗಲೇ ಬಂದ್‌ಗೆ ಬೆಂಬಲವನ್ನು ಸೂಚಿಸಿದೆ .
ಸುಪ್ರೀಂ ಕೋರ್ಟ್ ನ ನಿರ್ದೇಶನವನ್ನು ವಿರೋಧಿಸಿ ರಿಸರ್ವೇಶನ್ ಬಚಾವೋ ಸಂಘರ್ಷ್ ಸಮಿತಿ ಬುಧವಾರ ರಾಷ್ಟ್ರವ್ಯಾಪಿ ಬಂದ್‌ಗೆ ಕರೆ ನೀಡಿದೆ. ಆದರೆ ಈವರೆಗೆ ಕರ್ನಾಟಕದಲ್ಲಿ ಈ ಬಂದ್‌ಗೆ ಯಾರೆಲ್ಲಾ ಬೆಂಬಲ ನೀಡುತ್ತಿದ್ದಾರೆ ಮತ್ತು ಈ ಬಂದ್ ಎಷ್ಟರಮಟ್ಟಿಗೆ ನಡೆಯುತ್ತದೆ ಎಂಬ ಬಗ್ಗೆ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಹಾಗಿದ್ದರೆ ಈ ಬಂದ್ ಕರೆ ಯಾಕೆ? ಆ ದಿನ ಏನೆಲ್ಲಾ ಇರುತ್ತೆ? ಏನೆಲ್ಲಾ ಇರಲ್ಲಾ ಎಂಬ ಸೂಕ್ತ ವರದಿ ಇಲ್ಲಿದೆ.
ಭಾರತ್ ಬಂದ್ ಹಿನ್ನಲೆ ಏನು ಅನ್ನೋದರ ಮಾಹಿತಿ ಇಲ್ಲಿದೆ?
ಇನ್ನು, ನಾಳೆ ನೀಡಲಾಗಿರುವ ಭಾರತ್ ಬಂದ್ ಕರೆಗೆ ಹಿಂದಿನ ಉದ್ದೇಶವೇನು ಅನ್ನೋದು ಮತ್ತು ಯಾವ ಯಾವ ಸಂಘಟನೆ ಈ ಬಂದ್‌ಗೆ ಕರೆ ನೀಡಿದ್ದಾರೆ ಎಂದು ನೋಡೋದಾದ್ರೆ, ಒದೇ ತಿಂಗಳ ಆಗಸ್ಟ್ 1 ರಂದು ನಡೆದ ವಿಚಾರಣೆಯ ಸಂದರ್ಭದಲ್ಲಿ, ಎಸ್‌ಸಿ/ಎಸ್‌ಟಿಯೊಳಗೆ ಉಪವರ್ಗಗಳನ್ನು ರಚಿಸಲು ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ನಿಜವಾಗಲೂ ಮೀಸಲಾತಿಯ ಅಗತ್ಯ ಇರುವವರಿಗೆ ಅದರಲ್ಲಿ ಆದ್ಯತೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಅಂದು ಹೇಳಿತ್ತು. ಇದೇ ವಿಚಾರ ಇದೀಗ ರಾಷ್ಟ್ರವ್ಯಾಪಿ ಚರ್ಚೆಗೆ ಕಾರಣವಾಗಿದೆ. ಇದಕ್ಕಾಗಿಯೇ ರಿಸರ್ವೇಶನ್ ಬಚಾವೋ ಸಂಘರ್ಷ್ ಸಮಿತಿ ಈ ಬಂದ್ ಗೆ ಕರೆ ನೀಡಿದೆ. ಈ ಬಂದ್ ಮುಖ್ಯ ಉದ್ದೇಶವೆಂದರೆ ಮೀಸಲಾತಿ ಕುರಿತ ಸುಪ್ರೀಂ ತೀರ್ಪನ್ನು ಪ್ರಶ್ನಿಸುವುದು ಮತ್ತು ಅದನ್ನು ಹಿಂಪಡೆಯಲು ಒತ್ತಾಯಿಸುವುದಾಗಿದೆ ಎಂದು ವರದಿಯಾಗಿದೆ.
ಬಂದ್ ದಿನ ಏನಿರುತ್ತೆ? ಏನಿರುವುದಿಲ್ಲ?
ಸಾಮಾನ್ಯವಾಗಿ ಭಾರತ್ ಬಂದ್ ಆದ ತಕ್ಷಣ ಸಾವರ್ಜನಿಕರ ವಲಯದಲ್ಲಿ ಕೆಲ ಸೇವೆಗಳೂ ಸಹ ಬಂದ್ ಆಗುತ್ತವೆ. ಹೀಗಾಗಿ ನಾಳಿನ ಬಂದ್ ದಿನ ಯಾವೆಲ್ಲಾ ಸೇವೆಗಳು ಇರಲಿದೆ? ಇರುವುದಿಲ್ಲ? ಎಂಬುದನ್ನು ನೋಡುವುದಾದರೆ, ತುರ್ತು ಸೇವೆಗಳು, ಆಸ್ಪತ್ರೆ, ಆಂಬ್ಯುಲೆನ್ಸ್ ಸೇವೆ ಹಾಗೂ ವೈದ್ಯಕೀಯ ಸೇವೆಗಳು, ಪೊಲೀಸ್ ಸೇವೆ, ಅಗತ್ಯ ಔಷಧಿಗಳು, ಸರ್ಕಾರಿ ಕಛೇರಿಗಳು, ಬ್ಯಾಂಕ್‌ಗಳು ಎಂದಿನಂತೆ ತಮ್ಮ ಕಾರ್ಯ ನಿರ್ವಹಿಸುತ್ತದೆ. ದಿನಿತ್ಯದ ಬಳಕೆಗೆ ಹಾಲು, ತರಕಾರಿ, ಮೊಸರುಗಳೂ ಸಹ ಲಭ್ಯವಿರಲಿದೆ. ಏನಾದರೂ ಬಂದ್ (ಪ್ರತಿಭಟನೆ) ಬೇರೆಯದೇ ರೂಪ ತಾಳಿದಲ್ಲಿ ತಕ್ಷಣದವೇ ತುರ್ತು ಸೇವೆಗಳಾದ ಆಸ್ಪತ್ರೆ, ಅಂಬ್ಯುಲೆನ್ಸ್ನಂತಹ ಸೇವೆಗಳನ್ನು ಹೊರತುಪಡಿಸಿ ಉಳಿದ ಸೇವೆಗಳು ಮಾತ್ರ ಬಂದ್ ಆಗಲಿದೆ.