ಬೆಂಗಳೂರು : ಬಿಜೆಪಿಯವರಿಗೆ ಸಣ್ಣ ವಿಷಯಕ್ಕೂ ರಾಜೀನಾಮೆ ಕೇಳೋದು ಚಾಳಿಯಾಗಿದೆ ಎಂದು ಕಾಂಗ್ರೆಸ್ ಶಾಸಕ ಕೋನರೆಡ್ಡಿ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಕೇಸ್ ಸಂಬಂಧ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ ಒತ್ತಾಯದ ವಿಚಾರಕ್ಕೆ ಅವರು ಪ್ರತಿಕ್ರಿಯೆ ನೀಡಿದರು. ಡೆತ್ ನೋಟ್‌ನಲ್ಲಿ ಕಾರ್ಪೊರೇಟರ್ ಹೆಸರು ಬರೆದಿದ್ದಾರೆ. ಹಾಗಾಂತ ಪ್ರಿಯಾಂಕ್ ಖರ್ಗೆ ಮೇಲೆ ಆರೋಪ ಮಾಡೋದು ಸರಿಯಲ್ಲ. ಸಣ್ಣ ವಿಷಯಕ್ಕೂ ರಾಜೀನಾಮೆ ಕೊಡಬೇಕು ಅನ್ನೋದು ಬಿಜೆಪಿಯ ಚಾಳಿಯಾಗಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದರು.

ಸುಮ್ಮನೆ ಆರೋಪ ಮಾಡೋದು ಅಷ್ಟೇ ಕೆಲಸ. ಪ್ರಿಯಾಂಕ್ ಖರ್ಗೆ ಮೇಲೆ ಏನಾದ್ರೂ ಆರೋಪ ಇದೆಯಾ ಹೇಳಿ? ಎಲ್ಲೋ ನಡೆದಿದ್ದಕ್ಕೆ ಅವರ ಮೇಲೆ ಆರೋಪ ಮಾಡೋದು ಸರಿಯಲ್ಲ. ಬಿಜೆಪಿಯವರಿಗೆ ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಪ್ರಿಯಾಂಕ್ ಖರ್ಗೆ ಒಬ್ಬ ಮುತ್ಸದ್ದಿ ರಾಜಕಾರಣಿ. ವಿಪಕ್ಷಗಳನ್ನು ಟೀಕೆ ಮಾಡುತ್ತಾರೆ ಎಂದು ಅವರ ರಾಜೀನಾಮೆ ಕೇಳೋದು ಸರಿಯಲ್ಲ. ನನ್ನ‌ ರಾಜಕೀಯ ಜೀವನದಲ್ಲಿ ಇಂತಹ ವಿಪಕ್ಷ ನಾನು ನೋಡೇ ಇಲ್ಲ. ಮೊದಲು ನಿಮ್ಮ ಮನೆ ನೋಡಿಕೊಳ್ಳಿ. ಹೊಸ ವರ್ಷಕ್ಕಾದ್ರೂ ಬಿಜೆಪಿಯವರಿಗೆ ಒಳ್ಳೆಯ ಬುದ್ಧಿ ಬರಲಿ ಎಂದು ಲೇವಡಿ ಮಾಡಿದ್ದಾರೆ.

Leave a Reply

Your email address will not be published. Required fields are marked *