Category: ದೇಶ

ಮಹಾಕುಂಭಮೇಳದಲ್ಲಿ ಡಿಕೆಶಿ ಪುತ್ರಿ – ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ

ಪ್ರಯಾಗ್‌ರಾಜ್ : ಮಹಾ ಕುಂಭಮೇಳದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಪುತ್ರಿ ಐಶ್ವರ್ಯ ಪಾಲ್ಗೊಂಡಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ ಭಕ್ತಿ-ಭಾವ ಮೆರೆದಿದ್ದಾರೆ. ಕುಂಭಮೇಳದಲ್ಲಿ ಕಳೆದ ಅದ್ಭುತ ಕ್ಷಣಗಳ ವೀಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಐಶ್ವರ್ಯ ಹಂಚಿಕೊಂಡಿದ್ದಾರೆ. ತಂದೆ ಡಿ.ಕೆ.ಶಿವಕುಮಾರ್‌ ಕುಂಭಮೇಳಕ್ಕೆ ಹೋಗುವ ಮುನ್ನ…

2027ಕ್ಕೆ ಚಂದ್ರಯಾನ-4, 2026ಕ್ಕೆ ಗಗನಯಾನ: ಸಚಿವ ಜಿತೇಂದ್ರ ಸಿಂಗ್‌

ನವದೆಹಲಿ : ಚಂದ್ರನ ಮೇಲ್ಮೈನಲ್ಲಿನ ಕಲ್ಲುಗಳನ್ನು ಭೂಮಿಗೆ ಹೊತ್ತು ತರುವ ಚಂದ್ರಯಾನ-4 ಮಿಷನ್‌ ಅನ್ನು 2027ರ ವೇಳೆ ಜಾರಿಮಾಡಲಾಗುವುದು ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್‌ ಹೇಳಿದ್ದಾರೆ. ಕಲ್ಲುಗಳ ಮಾದರಿಗಳನ್ನು ಹೊರುವ ಶಕ್ತಿ ಹೊಂದಿರುವ ಎರಡು ಪ್ರತ್ಯೇಕ…

ಬಾಲಿವುಡ್‌ ನಟ ಸೋನು ಸೂದ್‌ ವಿರುದ್ಧ ಅರೆಸ್ಟ್‌ ವಾರೆಂಟ್‌

ಕೋಲ್ಕತ್ತಾ : ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸೋನು ಸೂದ್ ವಿರುದ್ಧ ಪಂಜಾಬ್ ನ್ಯಾಯಾಲಯ ಬಂಧನ ವಾರೆಂಟ್ ಹೊರಡಿಸಿದೆ. ಲುಧಿಯಾನ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ರಮಣಪ್ರೀತ್ ಕೌರ್ ಅವರು ಈ ವಾರೆಂಟ್ ಹೊರಡಿಸಿದ್ದಾರೆ. ಲುಧಿಯಾನ ಮೂಲದ ವಕೀಲ ರಾಜೇಶ್ ಖನ್ನಾ ಅವರು…

ಗಡಿಪಾರು ಹೊಸದಲ್ಲ, ಅಕ್ರಮ ವಲಸೆಯನ್ನು ತಡೆಯುವ ಅಗತ್ಯವಿದೆ: ಎಸ್. ಜೈಶಂಕರ್

ಅಕ್ರಮ ವಲಸಿಗರನ್ನು ದೇಶಗಳಿಗೆ ಗಡಿಪಾರು ಮಾಡುವ ಪ್ರಕ್ರಿಯೆ ಹೊಸದಲ್ಲ ಮತ್ತು ಎಲ್ಲಾ ದೇಶಗಳು ತಮ್ಮ ಪ್ರಜೆಗಳು ವಿದೇಶದಲ್ಲಿ ಅಕ್ರಮವಾಗಿ ನೆಲೆಸಿರುವುದು ಕಂಡುಬಂದರೆ ಅವರನ್ನು ವಾಪಸ್ ಕರೆಸಿಕೊಳ್ಳಬೇಕು ಎಂದು ವಿದೇಶಾಂಗ ಸಚಿವ ಎಸ್​ ಜೈಶಂಕರ್ ಹೇಳಿದ್ದಾರೆ. ಅಕ್ರಮ ವಲಸೆಯನ್ನು ತಡೆಯುವಂತೆಯೂ ಅವರು ಕರೆ…

ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯಾದ ಹೆಚ್‌.ಡಿ.ಕುಮಾರಸ್ವಾಮಿ

ನವದೆಹಲಿ : ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ನೆನ್ನೆ ದೆಹಲಿಯ ರಾಷ್ಟ್ರಪತಿ ಭವನಕ್ಕೆ ತೆರಳಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಗೌರವಪೂರ್ವಕವಾಗಿ ಭೇಟಿಯಾದರು. ಭೇಟಿ ವೇಳೆ ತಮ್ಮ ಎರಡೂ ಇಲಾಖೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ…

ದೆಹಲಿಯಲ್ಲಿ ESIC ಡಿಜಿ ಭೇಟಿಯಾದ ಸಂಸದ ಕ್ಯಾ.ಚೌಟ

ನವದೆಹಲಿ : ದಕ್ಷಿಣ ಕನ್ನಡದ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ನವದೆಹಲಿಯಲ್ಲಿ ಇಂದು ಇಎಸ್‌ಐಸಿ ಪ್ರಧಾನ ಕಚೇರಿಯ ಮಹಾ ನಿರ್ದೇಶಕ ಅಶೋಕ್ ಕುಮಾರ್ ಸಿಂಗ್ ಅವರನ್ನು ಭೇಟಿ ಮಾಡಿ ಮಂಗಳೂರಿನ ಇಎಸ್‌ಐಸಿ ಆಸ್ಪತ್ರೆ ಎದುರಿಸುತ್ತಿರುವ ಮೂಲಸೌಕರ್ಯ ಕೊರತೆ ಸೇರಿದಂತೆ ಹಲವು ಸಮಸ್ಯೆಗಳ…

‘ದೇಶಾದ್ಯಂತ ನಾನ್​-ವೆಜ್ ಬ್ಯಾನ್ ಮಾಡಿ’; ಶತ್ರುಘ್ನ ಸಿನ್ಹಾ ಆಗ್ರಹಕ್ಕೆ ಟೀಕೆ!

ನಟ ಹಾಗೂ ರಾಜಕಾರಣಿ ಶತ್ರುಘ್ನ ಸಿನ್ಹಾಗೂ ವಿವಾದಕ್ಕೂ ಎಲ್ಲಿಲ್ಲದ ನಂಟು. ಅವರು ಮಾತನಾಡುವಾಗ ಎಡವಿ ಸಾಕಷ್ಟು ವಿವಾದ ಮಾಡಿಕೊಂಡಿದ್ದು ಇದೆ. ಈಗ ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬಂದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ದೇಶಾದ್ಯಂತ ಮಾಂಸಾಹಾರವನ್ನು ಬ್ಯಾನ್ ಮಾಡಬೇಕು…

ಗೌತಮ್‌ ಅದಾನಿ ಪುತ್ರನ ವಿವಾಹ ಪ್ರತಿಜ್ಞೆ – ಅಂಗವಿಕಲ ಹೆಣ್ಣುಮಕ್ಕಳ ವಿವಾಹಕ್ಕೆ ನೆರವು ಘೋಷಣೆ!

ನವದೆಹಲಿ : ಕೈಗಾರಿಕೋದ್ಯಮಿ ಗೌತಮ್‌ ಅದಾನಿ ಅವರ ಪುತ್ರ ಜೀತ್‌ ಅದಾನಿ ಮದುವೆಗೆ ಸಜ್ಜಾಗಿದ್ದಾರೆ. ತಮ್ಮ ವಿವಾಹದ ಗೌರವಾರ್ಥ, ಪ್ರತಿ ವರ್ಷ 500 ಅಂಗವಿಕಲ ಮಹಿಳೆಯರಿಗೆ ಮದುವೆಗೆ ತಲಾ 10 ಲಕ್ಷ ರೂ. ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ. ಜೀತ್‌ ಅದಾನಿ ಅವರು…

ಜಮ್ಮು ಕಾಶ್ಮೀರದ ಭದ್ರತಾ ಪರಿಸ್ಥಿತಿ ಪರಿಶೀಲಿಸಿದ ಅಮಿತ್‌ ಶಾ

ನವದೆಹಲಿ : ಕೇಂದ್ರ ಸರ್ಕಾರದ ನಿರಂತರ ಮತ್ತು ಸಂಘಟಿತ ಪ್ರಯತ್ನಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನಾ ಪರಿಸರ ವ್ಯವಸ್ಥೆಯನ್ನು ಬಹಳ ದುರ್ಬಲಗೊಳಿಸಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಭಯೋತ್ಪಾದನೆಯ ವಿರುದ್ಧದ ಹೋರಾಟವನ್ನು ಹೆಚ್ಚಿಸುವಂತೆ ಎಲ್ಲಾ ಭದ್ರತಾ ಸಂಸ್ಥೆಗಳಿಗೆ…

ಹಿಂದೂಯೇತರ 18 ಸಿಬ್ಬಂದಿ ವಿರುದ್ಧ ಕಠಿಣ ಕ್ರಮ: ತಿರುಪತಿ ಬೋರ್ಡ್‌

ತಿರುಪತಿ : ಹಿಂದೂಯೇತರ ಉದ್ಯೋಗಿಗಳ ವಿರುದ್ಧ ತಿರುಮಲ ತಿರುಪತಿ ದೇವಸ್ಥಾನಂ ಆಡಳಿತ ಮಂಡಳಿ ಕೊನೆಗೂ ಕ್ರಮ ತೆಗೆದುಕೊಂಡಿದೆ. ಕರ್ತವ್ಯದಲ್ಲಿದ್ದಾಗ ಹಿಂದೂ ಧರ್ಮದ ಆಚರಣೆಗಳನ್ನು ಪಾಲನೆ ಮಾಡದ 18 ಹಿಂದೂಯೇತರ ಸಿಬ್ಬಂದಿಯನ್ನು ಇತರೆ ಇಲಾಖೆಗಳಿಗೆ ವರ್ಗ ಮಾಡಿ ಆದೇಶ ಹೊರಡಿಸಿದೆ. ಸ್ವಯಂ ನಿವೃತ್ತಿ…