ವಾಷಿಂಗ್ಟನ್ : ಉಕ್ರೇನ್-ರಷ್ಯಾ ಯುದ್ಧಕ್ಕೆ ಸಂಬಂಧಿಸಿದಂತೆ ನಾವೀಗ ಕದನ ವಿರಾಮದ ಬಗ್ಗೆ ಮಾತನಾಡಲು ಸಾಧ್ಯವಿಲ್ಲ. ಏಕೆಂದರೆ ಅದು ಎಂದಿಗೂ ಪ್ರಯೋಜನಕಾರಿಯಾಗಲಿಲ್ಲ ಎಂದರು.
ಪುಟಿನ್ ಅವರು 25 ಬಾರಿ ಕದನ ವಿರಾಮ ಘೋಷಿಸಿ, ಯುದ್ಧ ಮುಂದುವರಿಸಿದ್ದಾರೆ. ಭದ್ರತಾ ಖಾತ್ರಿಯಿಲ್ಲದೇ ಕದನ ವಿರಾಮ ಮುಂದುವರಿಸಲು ಸಾಧ್ಯವಿಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಪುಟಿನ್‌ಗೆ ಖಡಾಖಂಡಿತವಾಗಿ ಹೇಳಿದರು.
ಓವಲ್ ಕಚೇರಿಯಲ್ಲಿ ನಾಯರಿಬ್ಬರ ಭೇಟಿ ಸಮಯದಲ್ಲಿ ಉಕ್ರೇನ್ ಅಧ್ಯಕ್ಷ ಭದ್ರತಾ ಒಪ್ಪಂದಗಳ ಕುರತು ಮಾತುಕತೆ ನಡೆಸಿದರು. ಈ ವೇಳೆ ಟ್ರಂಪ್-ಝಲೆನ್ಸ್ಕಿ ನಡುವೆ ಮಾತಿನ ಚಕಮಕಿಯೂ ನಡೆಯಿಯು. ಈಗ ನಾನು ಭದ್ರತೆಯ ಬಗ್ಗೆ ಈಗ ಮಾತನಾಡಲು ಬಯಸುವುದಿಲ್ಲ ಎಂದು ಟ್ರಂಪ್ ಹೇಳಿದರು.
ಜೊತೆಗೆ ನಾವು ಸಮಸ್ಯೆಗಳನ್ನು ಸರಿಪಡಿಸಲು ಎದುರುನೋಡುತ್ತಿದ್ದೇವೆ ಎಂದ ಟ್ರಂಪ್ ಯುದ್ಧ ನಿಲ್ಲಿಸುವ ಬಗ್ಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ರು. ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದಂತೆ, ಟ್ರಂಪ್ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರನ್ನು ಶ್ವೇತಭವನದಿಂದ ಹೊರಹೋಗುವಂತೆ ಸೂಚಿಸಿದರು.
ಈ ವೇಳೆ ಭದ್ರತೆಯ ಕುರಿತು ಮಾತನಾಡಿದ ಝಲೆನ್ಸ್ಕಿ, ರಷ್ಯಾದೊಂದಿಗಿನ ಉಕ್ರೇನ್‌ನ ಸಂಘರ್ಷ ಕೊನೆಗೊಳಿಸುವ ಸಂಬಂಧ ಕದನ ವಿರಾಮದ ಕುರಿತು ಸುದೀರ್ಘ ಮಾತುಕತೆಗಳ ಭಾಗವಾಗಿ ಮಾತನಾಡಿದರು. ಅಮೆರಿಕದೊಂದಿಗಿನ ಖನಿಜ ಒಪ್ಪಂದದ ಕುರಿತು ಚರ್ಚಿಸಲು ಶ್ವೇತಭವನಕ್ಕೆ ಆಗಮಿಸಿದ ಝೆಲೆನ್ಸ್ಕಿ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಉಲ್ಲೇಖಿಸಿ, ನಮ್ಮ ಭೂಪ್ರದೇಶದಲ್ಲಿರುವ ಕೊಲೆಗಾರನೊಂದಿಗೆ ರಾಜೀ ಮಾಡಿಕೊಳ್ಳಬೇಡಿ ಎಂದು ಟ್ರಂಪ್ ಅವರನ್ನು ಒತ್ತಾಯಿಸಿದರು.
ಇದೇ ವೇಳೆ ಪತ್ರಕರ್ತರಿಗೆ ಭದ್ರತೆಯ ಬಗ್ಗೆ ಝಲೆನ್ಸ್ಕಿ ಕೂಡ ಪ್ರತಿಕ್ರಿಯಿಸಿದರು. ನಾವೀಗ ಕದನ ವಿರಾಮದ ಬಗ್ಗೆ ಮಾತನಾಡಲು ಸಾಧ್ಯವಿಲ್ಲ, ಏಕೆಂದರೆ ಅದು ಎಂದಿಗೂ ಪ್ರಯೋಜನಕಾರಿಯಾಗಲಿಲ್ಲ. ಪುಟಿನ್ ಅವರು 25 ಬಾರಿ ಕದನ ವಿರಾಮ ಘೋಷಿಸಿ, ಯುದ್ಧ ಮುಂದುವರಿಸಿದ್ದಾರೆ. ಭದ್ರತಾ ಖಾತ್ರಿಯಿಲ್ಲದೇ ಕದನ ವಿರಾಮ ಮುಂದುವರಿಸಲು ಸಾಧ್ಯವಿಲ್ಲ ಎಂದು ಉಕ್ರೇನ್ ಅಧ್ಯಕ್ಷ ಖಡಾಖಂಡಿತವಾಗಿ ಹೇಳಿದರು.
ಟ್ರಂಪ್ ಈ ಯುದ್ಧ ನಿಲ್ಲಿಸುವ ಉದ್ದೇಶ ಹೊಂದಿರಬಹುದು. ಆದ್ರೆ ಅದಕ್ಕೆ ನಮ್ಮ ಬಳಿಯೂ ಬಲವಾದ ಸೈನ್ಯ ಇರಬೇಕು. ನಾವು ಬಲಿಷ್ಠವಾಗಿದ್ದರೆ ಮಾತ್ರ ಪುಟಿನ್ ಸೈನ್ಯವು ನಮಗೆ ಹೆಸರುತ್ತದೆ. ನಮ್ಮ ಸೈನ್ಯವು ಖಾಲಿಯಾಗಿದ್ದರೆ, ಪುಟಿನ್ ಸೇನೆ ನಮ್ಮ ಮೇಲೆ ಸವಾರಿ ಮಾಡುತ್ತದೆ.
ಆಗ ನಮ್ಮನ್ನೂ ನಾವು ಉಳಿಸಿಕೊಳ್ಳು ಸಾಧ್ಯವಾಗಲ್ಲ ಎಂದು ಝಲೆನ್ಸ್ಕಿ ಕಳವಳ ವ್ಯಕ್ತಪಡಿಸಿದರು. ಇದಕ್ಕೆ ಬಗ್ಗದ ಟ್ರಂಪ್, ಕದನ ವಿರಾಮಕ್ಕಾಗಿ ರಾಜೀ ಮಾಡಿಕೊಳ್ಳಬೇಕಾಗುತ್ತದೆ ಎಂದು ನೇರವಾಗಿಯೇ ಹೇಳಿದರು. ನಾನು ಅಮೆರಿಕ ಮತ್ತು ಪ್ರಪಂಚದ ಒಳಿತಿಗಾಗಿ ಹೊಂದಿಕೊಂಡಿದ್ದೇನೆ ಎಂದು ಟ್ರಂಪ್ ಹೇಳಿದರು.